
ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣ ದಿನದಿಂದ ದಿನಕ್ಕೆ ಒಂದಲ್ಲ ಒಂದು ತಿರುವು ಪಡೆಯುತ್ತಲೇ ಇದೆ. ಸುಶಾಂತ್ ಸಿಂಗ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ಈಗಾಗಲೇ ಸಿನಿಮಾ ಮಂದಿ ಸೇರಿದಂತೆ ಹಲವರಿಗೆ ನೋಟಿಸ್ ನೀಡಿ, ವಿಚಾರಣೆ ಮಾಡಲಾಗಿದೆ. ಇದರ ಬೆನ್ನಲ್ಲೇ ಅವರು ಆತ್ಮಹತ್ಯೆ ಮಾಡಿಕೊಳ್ಳಲು ಹಲವಾರು ಕಾರಣ ಇರಬಹುದು ಎಂದು ಕೂಡ ಊಹಿಸಲಾಗುತ್ತಿದೆ.
ಹಲವಾರು ಮಂದಿ ಅವರ ಬಗ್ಗೆ ತಿಳಿದವರು ಅವರ ಮನಸ್ಥಿತಿ ಬಗ್ಗೆ ಹೇಳಿಕೆಗಳನ್ನು ನೀಡುತ್ತಲೇ ಇದ್ದಾರೆ. ಇದೀಗ ಸುಶಾಂತ್ ಅವರ ಜಿಮ್ ಸ್ನೇಹಿತರೊಬ್ಬರು ನೀಡಿರುವ ಹೇಳಿಕೆ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಕಾರಣವಾಗುತ್ತಿದೆ.
ಹೌದು, ಹೊಸದಾಗಿ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದ ಸುಶಾಂತ್ ಸಿಂಗ್ ಅವರು ಐಫಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಶಾರೂಖ್ ಖಾನ್ ಅವರನ್ನು ವೇದಿಕೆ ಮೇಲೆ ಅವಮಾನಿಸಿದ್ದರಂತೆ. ಈ ವಿಚಾರವಾಗಿ ಸುಶಾಂತ್ ಸಿಂಗ್ ತುಂಬಾ ಬೇಸರಗೊಂಡಿದ್ದರು ಎಂದು ಸುಶಾಂತ್ ಅವರ ಜಿಮ್ ಸ್ನೇಹಿತ ಹೇಳಿದ್ದಾರೆ. ಅಷ್ಟೆ ಅಲ್ಲ ಇವರ ನೃತ್ಯದ ಬಗ್ಗೆಯೂ ಶಾರೂಖ್ ವ್ಯಂಗ್ಯವಾಡಿದ್ದರಂತೆ.