ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಡೈರಿ ಬಹಿರಂಗಗೊಂಡಿದೆ. ಇದ್ರಲ್ಲಿ ಸುಶಾಂತ್ ಬರೆದಿರುವ ವಿಷ್ಯಗಳನ್ನು ಗಮನಿಸಿದ್ರೆ ಸುಶಾಂತ್ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎನ್ನಿಸುತ್ತದೆ. ಸುಶಾಂತ್ ಜೀವನದ ಬಗ್ಗೆ ಸಾಕಷ್ಟು ಕನಸುಕಟ್ಟಿದ್ದರು. ಬಾಲಿವುಡ್ ನಿಂದ ಹಾಲಿವುಡ್ ವರೆಗೆ ಹೆಸರು ಮಾಡಲು ಬಯಸಿದ್ದರು.
ಇದಕ್ಕಾಗಿ ಸುಶಾಂತ್ ತಯಾರಿ ಆರಂಭಿಸಿದ್ದರು. ಇದಕ್ಕೆ ಒಂದು ಯೋಜನೆ ಸಿದ್ಧಪಡಿಸಿದ್ದರು. ಈ ಯೋಜನೆಯನ್ನು ವೃತ್ತಿಪರ ರೀತಿಯಲ್ಲಿ ಪ್ಲಾನ್ ಮಾಡಿದ್ದ ಸುಶಾಂತ್ ಸಹೋದರಿಯರಿಗೆ ಹತ್ತಿರವಾಗಿದ್ದರು.ಪ್ರೊಡಕ್ಷನ್ ಹೌಸ್ ನಿರ್ಮಿಸುವ ಯೋಜನೆಯಲ್ಲಿ ಸಹೋದರಿಯರನ್ನು ಸೇರಿಸಿಕೊಂಡಿದ್ರು.
ಸುಶಾಂತ್ ಕುಟುಂಬದಿಂದ ದೂರವಿದ್ದರು ಎಂಬ ಆರೋಪ ಮಾಡ್ತಿದ್ದವರ ಮೇಲೆ ಈಗ ಅನುಮಾನ ಮೂಡಿದೆ. ಸುಶಾಂತ್ ತನ್ನ ಪ್ರೀತಿಪಾತ್ರರನ್ನು ಕಳೆದುಕೊಳ್ಳಲು ಎಂದಿಗೂ ಬಯಸುತ್ತಿರಲಿಲ್ಲ.ಅವರು ಡೈರಿ ಪ್ರಕಾರ ಅವರು ಸಕಾರಾತ್ಮಕ ಮತ್ತು ಶಕ್ತಿಯುತ ವ್ಯಕ್ತಿಯಾಗಿದ್ರು.
ಹಾಲಿವುಡ್ ಪ್ರವೇಶ ಮಾಡಬೇಕು,10 ಉನ್ನತ ವಿಚಾರ ಹಾಗೂ 50 ಕೋಟಿ ಆದಾಯ ಗಳಿಕೆ ಮತ್ತು ಕಡಿಮೆ ವೆಚ್ಚ ಅವ್ರ 2020ರ ಪ್ಲಾನ್ ಆಗಿತ್ತು.