ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿ ನಕ್ಕೊಂದು ಮಾಹಿತಿ ಹೊರಗೆ ಬರ್ತಿದೆ.
ಈಗ ಡ್ರಗ್ಸ್ ಮಾಫಿಯಾ ಬಗ್ಗೆ ತನಿಖೆ ನಡೆಯುತ್ತಿದೆ. ಸಿಬಿಐ ತನಿಖೆ ಶುರು ಮಾಡಿ ಇಂದಿಗೆ 7 ದಿನಗಳು ಕಳೆದಿವೆ. ಸುಶಾಂತ್ ಫ್ಲಾಟ್ಮೆಂಟ್ ಸಿದ್ಧಾರ್ಥ್ ಮಹತ್ವದ ವಿಷ್ಯವೊಂದನ್ನು ಹೇಳಿದ್ದಾನೆ. ಆತನ ಹೇಳಿಕೆಯಡಿ ರಿಯಾ ವಿಚಾರಣೆ ನಡೆಯಲಿದೆ.
ಈ ಎಲ್ಲದರ ಮಧ್ಯೆ ಸುಶಾಂತ್ ತಂದೆ, ರಿಯಾ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ರಿಯಾ ತನ್ನ ಮಗನಿಗೆ ಪ್ರತಿ ದಿನ ವಿಷ ನೀಡ್ತಿದ್ದಳು ಎಂದಿದ್ದಾರೆ. ಪ್ರಕರಣದಲ್ಲಿ ರಿಯಾ ಹಾಗೂ ಆಕೆ ಗುಂಪಿನಲ್ಲಿದ್ದವರನ್ನು ಬಂಧಿಸಬೇಕೆಂದು ಸುಶಾಂತ್ ಸಿಂಗ್ ತಂದೆ ಹೇಳಿದ್ದಾರೆ.
ಇನ್ನು ಸುಶಾಂತ್ ಅವರ ಸಹೋದರಿ ಶ್ವೇತಾ ಸಿಂಗ್ ಟ್ವೀಟ್ ಮಾಡಿದ್ದಾರೆ. ಅಪರಾಧಿಗಳನ್ನು ಇನ್ನೂ ಬಂಧಿಸುವ ನಿರೀಕ್ಷೆಯಲ್ಲಿ ನಾವಿದ್ದೇವೆಂದು ಶ್ವೇತಾ ಹೇಳಿದ್ದಾರೆ.