
ತಮ್ಮ ಮಧುರವಾದ ಧ್ವನಿಯಿಂದ ಸಾಕಷ್ಟು ಜನಪ್ರಿಯತೆ ಪಡೆದಿರುವ ‘ಸೋಜುಗಾದ ಸೂಜು ಮಲ್ಲಿಗೆ’ ಖ್ಯಾತಿಯ ಗಾಯಕಿ ಅನನ್ಯಾ ಭಟ್ ಹೊಸ ಸಿನಿಮಾವೊಂದರಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಲು ಸಜ್ಜಾಗಿದ್ದಾರೆ.
ಈ ಚಿತ್ರಕ್ಕೆ ‘ಸೇನಾಪುರ’ ಎಂಬ ಟೈಟಲ್ ಇಟ್ಟಿದ್ದು, ಈ ಚಿತ್ರದಲ್ಲಿ ಅನನ್ಯಾ ಭಟ್ ಸೇರಿದಂತೆ ಗಿರಿರಾಜ್, ದಿನೇಶ್ ಮಂಗಳೂರು, ಪವನ್ ಕುಮಾರ್, ಶೇಖರ್, ಮುಂತಾದ ಕಲಾವಿದರು ಅಭಿನಯಿಸಿದ್ದಾರೆ. ಗುರು ಸವನ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರಲಿದ್ದು, ಅಮಿತ್ ಕುಮಾರ್ ಹಾಗೂ ರಾಹುಲ್ ದೇವ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
