ಬಾಲಿವುಡ್ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡು ತಿಂಗಳು ಕಳೆದಿದೆ. ಆದ್ರೆ ಸುಶಾಂತ್ ಸಾವನ್ನು ಅಭಿಮಾನಿಗಳಿಗೆ ನಂಬಲು ಸಾಧ್ಯವಾಗ್ತಿಲ್ಲ. ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣದ ತನಿಖೆ ಇನ್ನೂ ನಡೆಯುತ್ತಿದೆ. ಈ ಮಧ್ಯೆ ಸುಶಾಂತ್ ಸಿಂಗ್, ಆತ್ಮಹತ್ಯೆಗೆ ಮೊದಲು ನಾಲ್ಕು ದಿನಗಳ ಹಿಂದೆ ಸಹೋದರಿ ಮಾತನಾಡಿದ್ದರಂತೆ. ಅವ್ರ ಮಾತಿನ ಬಗ್ಗೆ ಸಹೋದರಿ ಈಗ ಹೇಳಿದ್ದಾರೆ.
ಸಹೋದರಿ ಶ್ವೇತಾ ಸಿಂಗ್ ಹಾಗೂ ಸುಶಾಂತ್ ಸಿಂಗ್ ಮಧ್ಯೆ ನಡೆದ ಚಾಟ್ ವಿವರವನ್ನು ಹಂಚಿಕೊಂಡಿದ್ದಾರೆ. ಅದ್ರಲ್ಲಿ ಶ್ವೇತಾ, ಯುಎಸ್ ಗೆ ಬರುವಂತೆ ಅನೇಕ ಬಾರಿ ಸುಶಾಂತ್ ಗೆ ಹೇಳ್ತಾರೆ. ತುಂಬಾ ಸಂದೇಶದ ನಂತ್ರ ತುಂಬಾ ಆಸೆಯಾಗ್ತಿದೆ ಸಹೋದರಿ ಎಂದು ಒಂದೇ ಒಂದು ಮೆಸ್ಸೇಜ್ ಮಾಡ್ತಾರೆ ಸುಶಾಂತ್. ಮತ್ತೊಮ್ಮೆ ಬರುವಂತೆ ಕೇಳಿದ್ರೆ ಅದಕ್ಕೆ ಸುಶಾಂತ್ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ.
ಇನ್ನೊಂದು ಪೋಸ್ಟ್ ನಲ್ಲಿ ಶ್ವೇತಾ,ಸ ಜೊತೆ ಕಳೆದ ಬಾಲ್ಯದಿಂದ ಹಿಡಿದು ಇಲ್ಲಿವರೆಗಿನ ಪಯಣದ ವಿವರ ಬರೆದಿದ್ದಾರೆ.ಅಲ್ಲದೆ ಇದೆಲ್ಲ ಕನಸಾಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಶ್ವೇತಾ ಬರೆದಿದ್ದಾರೆ.