ಲಾಕ್ ಡೌನ್ ಅವಧಿಯಲ್ಲಿ ಹೆಚ್ಚಿನ ನಟ – ನಟಿಯರು ಡಿಪ್ರೆಶನ್ ಗೆ ಹೋದ ವಿಷಯಗಳ ಬಗ್ಗೆ ನೀವು ತಿಳಿದಿದ್ದೀರಿ. ಆದರೆ ಅದಿತಿ ರಾವ್ ಹೈದರಿ ಈ ಅವಧಿಯನ್ನು ಹೇಗೆ ಕಳೆದರು ಎಂಬುದು ನಿಮಗೆ ಗೊತ್ತೇ…?
ದಿನನಿತ್ಯ ಬೆಳಿಗ್ಗೆ ಏಳುವ ಮೂಡ್ ಇಲ್ಲದೆಯೇ ಎದ್ದು ಮಾಡಲು ಏನೂ ಇಲ್ಲದ ಸನ್ನಿವೇಶದಲ್ಲಿ ದಿನ ಕಳೆಯುವುದೆಂದರೆ ಬಹಳ ಹಿಂಸೆ ಎನಿಸುತ್ತಿತ್ತು. ನಿಧಾನಕ್ಕೆ ಕೌನ್ಸಿಲರ್ ಸಹಾಯದಿಂದ ಮತ್ತೆ ಸಹಜ ಸ್ಥಿತಿಗೆ ಮರಳುವ ದಿನಗಳಲ್ಲಿ ಇವರಿಗೆ ಹೆಚ್ಚು ನೆರವಾಗಿದ್ದು ಅವರ ಮನೆಯ ನಾಯಿ ಎಂದರೆ ನೀವು ನಂಬುತ್ತೀರಾ..?
ನಿಮ್ಮ ಮನೆಯ ಪೆಟ್ ನಿಮ್ಮ ನಿಜವಾದ ಗೆಳೆಯ. ನೀವೆಷ್ಟೇ ಬೇಸರದಲ್ಲಿದ್ದರೂ ನಾಯಿ, ಬೆಕ್ಕು ಅಥವಾ ಹಕ್ಕಿಗಳ ಜೊತೆ ಸಮಯ ಕಳೆಯುವುದರಿಂದ ನಿಮ್ಮ ಮನಸ್ಸಿಗೆ ಸಮಾಧಾನ ಸಿಗುತ್ತದೆ ಎಂಬುದು ಅದಿತಿ ಅಭಿಪ್ರಾಯ.
ಡಿಪ್ರೆಶನ್ ನಿಂದ ಹೊರಬರಲು ಪೆಟ್ ಗಿಂತ ಉತ್ತಮವಾದುದು ಬೇರಿಲ್ಲ. ಇವುಗಳ ಜೊತೆ ಆಟವಾಡುವುದರಿಂದ ಮನಸ್ಸಿಗೂ ಸಮಾಧಾನ, ಖುಷಿ. ಇದರಿಂದ ನಾವೂ ಚುರುಕಾಗುತ್ತೇವೆ ಎನ್ನುತ್ತಾರವರು.
ನಾಯಿ ಜೊತೆ ಓಡುವುದು ಅಟವಾಡುವುದು, ಅದರೊಂದಿಗಿನ ವಾಕಿಂಗ್ ಗೆ ಹೊರತಾಗಿ ಬೇರೆ ವರ್ಕೌಟ್ ಕೂಡಾ ಬೇಕಿಲ್ಲ ಎಂಬುದು ಅವರ ಅನುಭವದ ಮಾತು.