ಬಾಲಿವುಡ್ ತಾರೆ ಸಲ್ಮಾನ್ ಖಾನ್, ಅವರ ಪನ್ವೇಲ್ ಫಾರ್ಮ್ ಹೌಸ್ ನಲ್ಲಿ ಸಿನಿಮಾ ತಾರೆಯರ ಶವವನ್ನು ಹೂಳುತ್ತಿದ್ದಾರೆ. ಇಲ್ಲಿ ಮಕ್ಕಳ ಕಳ್ಳ ಸಾಗಾಣಿಕೆಯು ನಡೆಯುತ್ತಿದೆ ಎಂದು ಆತನ ನೆರೆಮನೆಯವರು ಆರೋಪಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಸಲ್ಮಾನ್ ತನ್ನ ವಿರುದ್ಧ ಆರೋಪ ಮಾಡುತ್ತಿರುವ ಕೇತನ್ ಕಕ್ಕಡ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ಸಲ್ಮಾನ್ ಖಾನ್ ಅವರ ಪನ್ವೇಲ್ ಫಾರ್ಮ್‍ಹೌಸ್ ಆಸ್ತಿ ವಿವಾದ ನಡೆಯುತ್ತಿದ್ದು, ಇದೀಗ ಇನ್ನಷ್ಟು ಬಿಗಡಾಯಿಸಿದೆ. ಸಲ್ಮಾನ್ ಅವರ ವಿರುದ್ಧ ನೆರೆಯ ಮನೆಯ ಕೇತನ್ ಕಕ್ಕಡ್ ಕೆಲವು ಆಘಾತಕಾರಿ ಆರೋಪಗಳನ್ನು ಮಾಡುತ್ತಿದ್ದಾರೆ. ಕೇತನ್ ಕಕ್ಕಡ್ ಅವರು ಸೋಶಿಯಲ್ ಮೀಡಿಯಾದಲ್ಲಿ ಸಲ್ಮಾನ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಕಕ್ಕಡ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಲ್ಮಾನ್ ಖಾನ್ ಅವರ ವಕೀಲ ಪ್ರದೀಪ್ ಗಾಂಧಿ, ಈ ಆರೋಪಗಳಿಗೆ ಯಾವುದೇ ಪುರಾವೆಗಳಿಲ್ಲ. ಇದು ನಟನ ಪ್ರತಿಷ್ಠೆಗೆ ಕಳಂಕ ತರುವ ಉದ್ದೇಶಪೂರ್ವಕ ಪ್ರಯತ್ನವಾಗಿದೆ ಎಂದು ಕಿಡಿಕಾರಿದ್ದಾರೆ.
ತನ್ನ ಮೇಲೆ ಸುಳ್ಳು, ಅವಹೇಳನಕಾರಿ ಮತ್ತು ಮಾನಹಾನಿಕರ ಆರೋಪಗಳನ್ನು ಮಾಡುವುದನ್ನು ತಡೆಯಲು ಸಲ್ಮಾನ್ ಖಾನ್ ಕಕ್ಕಡ್ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ಹಾಕಿದ್ದರು. ಆದರೆ ಮಧ್ಯಂತರ ಆದೇಶದಿಂದ ಸಲ್ಮಾನ್ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.
ಈ ನಡುವೆ ಸಲ್ಮಾನ್ ವಿರುದ್ಧ ಆಸ್ತಿ ಕಬಳಿಕೆಯ ಆರೋಪ ಮಾಡಿರುವ ಕೇತನ್ ಕಕ್ಕಡ್, ಸಲ್ಮಾನ್ ರವರ ಅರ್ಪಿತಾ ಫಾರ್ಮ್ಸ್ ಪಕ್ಕದಲ್ಲೆ ನನ್ನ ಪ್ಲಾಟ್ ಇದೆ. ಆದರೆ ಅಲ್ಲಿಗೆ ಹೋಗೊಕೆ ಬಿಡದಂತೆ, ಸಂಪೂರ್ಣವಾಗಿ ಪ್ರವೇಶ ನಿರ್ಬಂಧಿಸಿದ್ದಾರೆ ಎಂದಿದ್ದಾರೆ. ಕೇತನ್ ಕಕ್ಕಡ್ ರವರ ಈ ಆರೋಪವನ್ನು ಸಲ್ಮಾನ್ ವಕೀಲ ನಿರಾಕರಿಸಿದ್ದಾರೆ.