‘ಬಾಹುಬಲಿ’ ಪ್ರಭಾಸ್ ಅಭಿನಯದಲ್ಲಿ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಪ್ಯಾನ್ ಇಂಡಿಯಾ ಚಿತ್ರ ’ಸಲಾರ್’ ಘೋಷಣೆ ಬೆನ್ನಲ್ಲೇ ವಿವಾದಗಳಿಗೂ ಕಾರಣವಾಗಿದೆ. ಸಲಾರ್ ಟೈಟಲ್ ಕುರಿತಾಗಿ ಸಾಕಷ್ಟು ಆಕ್ರೋಶಗಳು ವ್ಯಕ್ತವಾಗಿದೆ. ಇದೀಗ ನಿರ್ದೇಶಕ ಪ್ರಶಾಂತ್ ನೀಲ್ ಅವರೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಸಲಾರ್ ಎಂಬುದು ಪರ್ಷಿಯನ್ ಪದ. ಚಿತ್ರಕ್ಕೆ ಅನ್ಯ ಭಾಷೆಯ ಪದ ಬಳಸಿ ಟೈಟಲ್ ನೀಡಿರುವುದು ಚರ್ಚೆಗೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಪ್ರಶಾಂತ್ ನೀಲ್, ಸಲಾರ್ ಅನ್ನೋದು ಆಡು ಭಾಷೆಯ ಪದವಾಗಿದ್ದು, ಸೇನಾಧಿಪತಿ ಎಂಬ ಅರ್ಥವನ್ನು ಸೂಚಿಸುತ್ತದೆ. ಫಸ್ಟ್ ಲುಕ್ ಪೋಸ್ಟರ್ ನಲ್ಲಿ ಹೆಚ್ಚು ಹೇಳಲು ಅವಕಾಶವಿಲ್ಲ. ಕಮಾಂಡ್ ಇನ್ ಚೀಫ್ ಎಂಬುದು ಆರ್ಮಿಯನ್ನು ಸೂಚಿಸುತ್ತದೆ. ಹಾಗಾಗಿ ವೈಲಂಟ್ ಎಂಬ ಟ್ಯಾಗ್ ಲೈನ್ ನಲ್ಲಿ ಒಂದಷ್ಟು ವಿಷಯಗಳನ್ನು ತಿಳಿಸುವ ಯತ್ನ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಕನ್ನಡದ ನಟರನ್ನು ಬಿಟ್ಟು ತೆಲುಗು ನಟನನ್ನು ಹಾಕಿಕೊಂಡು ಪ್ಯಾನ್ ಇಂಡಿಯಾ ಚಿತ್ರ ಮಾಡಲು ಹೊರಟಿರುವುದರ ಜೊತೆಗೆ ಸಲಾರ್ ಎಂಬ ಪರ್ಷಿಯನ್ ಟೈಟಲ್ ವಿವಾದಕ್ಕೆ ಕಾರಣವಾಗಿತ್ತು.