ಬಾಲಿವುಡ್ ನಟಿ ಸನ್ನಿ ಲಿಯೋನ್ ಬಗ್ಗೆ ಎಲ್ಲರಿಗೂ ತಿಳಿದೆ ಇದೆ. ಅವರ ಸೌಂದರ್ಯಕ್ಕೆ ಮಾರು ಹೋಗದವರೇ ಇಲ್ಲ. ಅಂತಹ ಸೌಂದರ್ಯ ಅವರದ್ದು. ನಟಿ ಸನ್ನಿ ಲಿಯೋನ್ ಇದೀಗ ತಮ್ಮ ಸೌಂದರ್ಯ ಹಾಗೂ ಫಿಟ್ ನೆಸ್ ರಹಸ್ಯ ತಿಳಿಸಿದ್ದಾರೆ.
ಸನ್ನಿ ಲಿಯೋನ್ ಅವರು ಬೆಳಿಗ್ಗೆಯನ್ನು ಹಾಲು ಮಿಕ್ಸ್ ಮಾಡದ ಬ್ಲ್ಯಾಕ್ ಕಾಫಿ ಕುಡಿಯುವುದರ ಮೂಲಕ ದಿನ ಶುರುಮಾಡುತ್ತಾರಂತೆ. ಅವರು ಜಂಕ್ ಫುಡ್ ಗಳಿಂದ ದೂರವಿರುತ್ತಾರಂತೆ. ಪ್ರತಿದಿನ 20 ನಿಮಿಷಗಳ ಕಾಲ ವಾಕಿಂಗ್ ಮಾಡುತ್ತಾರಂತೆ. ರಾತ್ರಿ ಮಲಗುವ ಮೊದಲು ಸ್ನಾನ ಮಾಡಿ ಚರ್ಮವನ್ನು ಶುಭ್ರಗೊಳಿಸುತ್ತಾರಂತೆ.
ಅವರು ಪ್ರತಿ ಊಟದಲ್ಲಿ ತರಕಾರಿ ಮತ್ತು ಹಾಲನ್ನು ಸೇವಿಸುತ್ತಾರಂತೆ. ಚರ್ಮವನ್ನು ಹೈಡ್ರೀಕರಿಸಲು ದಿನಕ್ಕೆ 8 ಗ್ಲಾಸ್ ನೀರು ಕುಡಿಯುತ್ತಾರಂತೆ. ಹಾಗೇ ಪ್ರತಿದಿನ ಎಳನೀರು ಸೇವಿಸುತ್ತಾರಂತೆ. ಕೂದಲಿಗೆ ಪ್ರತಿದಿನ ತೆಂಗಿನೆಣ್ಣೆಯಿಂದ ಮಸಾಜ್ ಮಾಡುತ್ತಾರಂತೆ.