
ಬಾಲಿವುಡ್ ಕಂಗನಾ ಮತ್ತು ಶಿವಸೇನೆ ನಡುವೆ ಉದ್ವಿಗ್ನ ವಾತಾವರಣವಿದೆ. ಅದೇ ಸಮಯದಲ್ಲಿ, ಕಂಗನಾ ತಾಯಿ ಆಶಾ ರನೌತ್ ಮಗಳ ಬೆಂಬಲಕ್ಕೆ ನಿಂತಿದ್ದಾರೆ. ಎಲ್ಲರ ಮುಂದೆ ಬಂದ ಆಶಾ ಮಗಳಿಗಾದ ಅನ್ಯಾಯದ ಬಗ್ಗೆ ಮಾತನಾಡಿದ್ದಾರೆ. ಶಿವಸೇನೆ ನನ್ನ ಮಗಳಿಗೆ ಅನ್ಯಾಯ ಮಾಡಿದೆ ಎಂದು ಹೇಳಿದ್ದಾರೆ. ಇಡೀ ಭಾರತದ ಜನರು ಇದನ್ನು ಸಹಿಸುವುದಿಲ್ಲ ಎಂದಿದ್ದಾರೆ.
ಕಂಗನಾ ತಪ್ಪಿದ್ದರೆ ದೇಶದ ಜನತೆ ಅವಳ ಜೊತೆ ಇರ್ತಿರಲಿಲ್ಲ. ಇದು ಯಾವ ರೀತಿಯ ಸರ್ಕಾರ..? ನನ್ನ ಮಗಳು ಪ್ರಜೆಗಳ ಒಂದು ಭಾಗ. ಅವಳಿಗೆ ತುಂಬಾ ಅನ್ಯಾಯವಾಗಿದೆ. ಇದು ಬಾಲ್ ಠಾಕ್ರೆ ಅವರ ಶಿವಸೇನೆಯೆ ಎಂಬ ಪ್ರಶ್ನೆ ಬರ್ತಿದೆ. ನಾವು ಬಾಲ್ಯದಿಂದ ನೋಡಿಕೊಂಡು ಬಂದ ಬಾಲ್ ಠಾಕ್ರೆ ಶಿವಸೇನೆ ಇದಲ್ಲ. ಈ ಶಿವಸೇನೆ ಹೇಡಿ. ನನ್ನ ಮಗಳು 15 ವರ್ಷಗಳ ಕಾಲ ಕಷ್ಟಪಟ್ಟು ದುಡಿದು ಅದ್ರಲ್ಲಿ ಕಚೇರಿ ಕಟ್ಟಿದ್ದಳು. ನಾವು ಮಧ್ಯಮ ವರ್ಗದವರು ಎಂದು ಆಶಾ ಹೇಳಿದ್ದಾರೆ.
ಅಮಿತ್ ಶಾ ಹಾಗೂ ಹಿಮಾಚಲ ಸರ್ಕಾರಕ್ಕೆ ಧನ್ಯವಾದ ಹೇಳಿದ ಆಶಾ, ನನ್ನ ಮಗಳ ಬಗ್ಗೆ ಅನೇಕರು ಕೆಟ್ಟದಾಗಿ ಮಾತನಾಡಿದ್ದಾರೆ. ನಿಮ್ಮ ಮನೆಯಲ್ಲಿ ಹೆಣ್ಣು ಮಕ್ಕಳಿಲ್ವಾ…? ನನ್ನ ಮಗಳ ಬಗ್ಗೆ ಯಾಕೆ ಅಸಂಬದ್ಧ ಮಾತುಗಳನ್ನು ಆಡ್ತಿರಾ ಎಂದು ಆಶಾ ಕೇಳಿದ್ದಾರೆ.