ಮುಂಬೈ: ಬಾಲಿವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಶಾಕಿಂಗ್ ನ್ಯೂಸ್ ಒಂದು ಹೊರ ಬಿದ್ದಿದೆ. ಬಾಲಿವುಡ್ ಬಾದ್ ಶಾ ಶಾರುಖ್ ಖಾನ್, ರಣಬೀರ್ ಕಪೂರ್, ಅರ್ಜುನ್ ರಾಮ್ ಪಾಲ್ ಹಾಗೂ ಡಿನೋ ಮೊರಿಯಾ ಹೆಸರು ಕೂಡ ಡ್ರಗ್ಸ್ ಜಾಲದ ನಂಟಿನ ಜೊತೆ ತಳುಕು ಹಾಕಿಕೊಂಡಿದೆ.
ಈ ಬಗ್ಗೆ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದು, ಎನ್ ಸಿ ಬಿ ಅಧಿಕಾರಿಯೊಬ್ಬರು ಬಾಲಿವುಡ್ ನ ಈ ಖ್ಯಾತ ನಾಮರು ಕೂಡ ಡ್ರಗ್ಸ್ ನಂಟು ಹೊಂದಿದ್ದಾರೆ ಎಂದು ತಿಳಿಸಿದ್ದಾರೆ ಎಂದಿದೆ. ಬಾಲಿವುಡ್ ನಲ್ಲಿ S, A, R ಮತ್ತು D ಅಕ್ಷಗಳಿಂದ ಆರಂಭವಾಗುವ ನಟರು ಡ್ರಗ್ಸ್ ಸೇವನೆ ಮಾಡುತ್ತಿದ್ದಾರೆ. ಎನ್ ಸಿ ಬಿ ಹೇಳಿಕೆ ಪ್ರಕಾರ ಎಸ್ ಎಂದರೆ ಶಾರುಖ್ ಖಾನ್, ಎ ಎಂದರೆ ಅರ್ಜುನ್ ರಾಮ್ ಪಾಲ್, ಆರ್ ಎಂದರೆ ರಣಬೀರ್ ಕಪೂರ್ ಹಾಗೂ ಡಿ ಎಂದರೆ ಡಿನೋ ಮೊರಿಯಾ ಎಂದು ಪ್ರಕಟಿಸಿವೆ.
ಬಂಧಿತ ಡ್ರಗ್ಸ್ ಪೆಡ್ಲರ್ ಎನ್ ಸಿ ಬಿ ವಿಚಾರಣೆ ವೇಳೆ ಈ ನಾಲ್ವರ ಹೆಸರನ್ನು ಬಾಯ್ಬಿಟ್ಟಿದ್ದಾನೆ. ಈ ಹಿನ್ನೆಲೆಯಲ್ಲಿ ಎನ್ ಸಿ ಬಿ ಶಾರುಖ್, ಅರ್ಜುನ್, ರಣಬೀರ್ ಹಾಗೂ ಡಿನೋ ಮೋರಿಯಾ ಬಗ್ಗೆ ಇನ್ನಷ್ಟು ಮಾಹಿತಿ ಕಲೆ ಹಾಕಿ ಅವರಿಗೆ ಸಮನ್ಸ್ ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ.