
ಇಂದು ಕರಾಟೆ ಕಿಂಗ್ ಶಂಕರ್ ನಾಗ್ ಅವರ ಹುಟ್ಟುಹಬ್ಬಕ್ಕೆ ಚಿತ್ರರಂಗದ ಸಾಕಷ್ಟು ಕಲಾವಿದರು ವಿಶ್ ಮಾಡಿದ್ದು, ಕನ್ನಡ ಚಿತ್ರರಂಗದ ಮರೆಯಲಾಗದ ಮಾಣಿಕ್ಯ ಶಂಕರ್ ನಾಗ್ ಅವರಿಗೆ ನವರಸ ನಾಯಕ ಜಗ್ಗೇಶ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ಕೋರಿದ್ದಾರೆ.
ಹಲವರು ಸತ್ತ ಮೂರು ದಿನಕ್ಕೆ ಮರೆವು..!! ಕೆಲವರು ಸತ್ತ ನೂರು ವರ್ಷಕ್ಕು ನೆನಪು..!! ಎಲ್ಲರಿಗೂ ಇವರು ನಟ ನನಗೆ ಆತ್ಮೀಯ..!! ಇವರ ತಮ್ಮನ ಪಾತ್ರ ಮಾಡಿದ ಹೆಮ್ಮೆಯಿದೆ..!!ಮಾಸದೆ ಮಾನಸದಲ್ಲಿ ಇವರ ಒಡನಾಟದ ನೆನಪು ಉಳಿದಿದೆ..!! ಮಹನೀಯರ ಹುಟ್ಟುಹಬ್ಬದ ಶುಭ ಕಾಮನೆ……ಎಂದು ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.