ನಟ ಚಿರಂಜೀವಿ ಸರ್ಜಾ 39ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಇಡೀ ಕನ್ನಡ ಚಿತ್ರರಂಗ ಈ ದುರಂತ ಸಾವಿಗೆ ಕಣ್ಣೀರಿಡುತ್ತಿದೆ.
ಚಿರಂಜೀವಿ ಸರ್ಜಾ ಇನ್ಸ್ಟಾಗ್ರಾಂನಲ್ಲಿ ಸಾಕಷ್ಟು ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದರು. ಅದರಲ್ಲೂ ಲಾಕ್ ಡೌನ್ ಸಮಯದಲ್ಲಿ ತಮ್ಮ ಹಳೆಯ ನೆನಪುಗಳನ್ನು ಅಭಿಮಾನಿಗಳಿಗೋಸ್ಕರ ಹಂಚಿಕೊಂಡಿದ್ದರು.
ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿರುವ ಕೊನೆಯ ಪೋಸ್ಟ್ ನಲ್ಲಿ ತಮ್ಮನ ಜೊತೆ ಇರುವ ಬಾಲ್ಯದ ಸವಿನೆನಪಿನ ಪೋಟೊ ಹಾಕಿದ್ದರು. ಇದು ಅವರ ಕೊನೆಯ ಪೋಸ್ಟ್ ಆಗಿದೆ.
https://www.instagram.com/p/CBFjJmhnwbM/?igshid=vj7zfxyovlp7