alex Certify ವಿಶ್ವ ಶ್ರೀಮಂತ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಅಕ್ಷಯ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶ್ವ ಶ್ರೀಮಂತ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಅಕ್ಷಯ್

ನಟ ಅಕ್ಷಯ್ ಕುಮಾರ್ ಸಿನಿಮಾಗಳೆಂದರೆ ಅಭಿಮಾನಿಗಳು ಸಕ್ಕತ್ ಖುಷಿ ಆಗ್ತಾರೆ. ದೊಡ್ಡ ಅಭಿಮಾನಿ ಬಳಗ ಹೊಂದಿರುವ ಈ ನಟ ವರ್ಷಕ್ಕೆ ನಾಲ್ಕರಿಂದ ಐದು ಸಿನಿಮಾ ಮಾಡುತ್ತಾರೆ. ಅಲ್ಲದೆ ಅವರದ್ದೇ ಆದ ನಿರ್ಮಾಣ ಸಂಸ್ಥೆ ಕೂಡ ಇದೆ. ಇದೀಗ ಈ ನಟ ಅತಿ ಹೆಚ್ಚು ಸಂಭಾವನೆ ಪಡೆಯುವ ಸ್ಟಾರ‍್ಸ್ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿದ್ದಾರೆ.

ಅತಿ ಹೆಚ್ಚು ಸಂಭಾವನೆ ಪಡೆಯುವ ವಿಶ್ವದ 100 ಸೆಲೆಬ್ರಿಟಿಗಳನ್ನೊಳಗೊಂಡ ಪೋರ್ಬ್ಸ್ ವಾರ್ಷಿಕ ಪಟ್ಟಿ ಪ್ರಕಟವಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಪಟ್ಟಿ ರಿಲೀಸ್ ಆಗಿದ್ದು, ಈ ಪಟ್ಟಿಯಲ್ಲಿ ಕಳೆದ ವರ್ಷದಂತೆ ಈ ವರ್ಷವೂ ಕೂಡಾ ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಮಾತ್ರ ಸ್ಥಾನ ಪಡೆದುಕೊಂಡಿದ್ದಾರೆ.

ಕಳೆದ ವರ್ಷ 65 ಮಿಲಿಯನ್ ಡಾಲರ್ ಸಂಪಾದನೆಯೊಂದಿಗೆ 33 ನೇ ಸ್ಥಾನದಲ್ಲಿದ್ದ ಅಕ್ಷಯ್ ಕುಮಾರ್ ಈ ಬಾರಿ ಅಂದಾಜು 48.5ಮಿಲಿಯನ್ ಡಾಲರ್ ನೊಂದಿಗೆ 52ನೇ ಸ್ಥಾನಕ್ಕೆ ಕುಸಿದಿದ್ದಾರೆ. ಹಾಲಿವುಡ್ ದಿಗ್ಗಜ ವಿಲ್ ಸ್ಮಿತ್ ಅವರಂತಹ ನಟರನ್ನು ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಹಿಂದಿಕ್ಕಿದ್ದಾರೆ. 44.5 ಮಿಲಿಯನ್ ಡಾಲರ್ ಸಂಪಾದನೆಯೊಂದಿಗೆ ವಿಲ್ ಸ್ಮಿತ್ 69ನೇ ಸ್ಥಾನದಲ್ಲಿದ್ದಾರೆ. ಏಂಜಲೀನಾ ಜೋಲಿ 35.5 ಮಿಲಿಯನ್ ಡಾಲರ್ ಮೌಲ್ಯದೊಂದಿಗೆ 99ನೇ ಸ್ಥಾನದಲ್ಲಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...