ಚಿರು ಬಾರದ ಲೋಕಕ್ಕೆ ಹೋಗಿದ್ದಾರೆ ಎನ್ನುವುದನ್ನು ಇನ್ನೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಚಿಕ್ಕ ವಯಸ್ಸಿನಲ್ಲಿಯೇ ಜೀವನದ ಕಥೆ ಮುಗಿಸಿದ್ದಾರೆ ಚಿರಂಜೀವಿ ಸರ್ಜಾ. ನಟ ಚಿರು ಅವರು ನಟಿ ಮೇಘನಾ ರಾಜ್ ಅವರನ್ನು ಸುಮಾರು ಪ್ರೀತಿಸಿ 2 ವರ್ಷದ ಹಿಂದೆ ಎಂದರೆ 2018 ಮೇ 3ರಂದು ವಿವಾಹವಾಗಿದ್ದರು. ಸದ್ಯ ಮೇಘನಾ ಅವರು ನಾಲ್ಕು ತಿಂಗಳ ಗರ್ಭಿಣಿಯಾಗಿದ್ದಾರೆ. ಚಿರು ಇಲ್ಲದ ಜೀವನವನ್ನು ಈ ನಟಿ ಹೇಗೆ ನಿಭಾಯಿಸುತ್ತಾರೋ ಆ ದೇವರಿಗೆ ಗೊತ್ತು.
ಇನ್ನು ಚಿರುವನ್ನು ಹತ್ತಿರದಿಂದ ನೋಡಿದ ಅನೇಕ ಮಂದಿ ಅವರ ಸ್ನೇಹಿತರು ಚಿರು ಇನ್ನಿಲ್ಲ ಎಂಬುದನ್ನು ಇಲ್ಲಿಯವರೆಗೂ ನಂಬದ ಸ್ಥಿತಿಯಲ್ಲಿದ್ದಾರೆ. ಇದರ ನಡುವೆಯೇ ಚಿರು ತನ್ನ ಸ್ನೇಹಿತರ ಜೊತೆಗೆ ಮಾಡಿದ್ದ ಕೊನೆಯ ವಾಟ್ಸಾಪ್ ಮೆಸೇಜ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಮೆಸೇಜ್ ಓದಿದರೆ ಕಣ್ಣಲ್ಲಿ ನೀರು ಬರುವಂತಿದೆ.
ಲಾಕ್ ಡೌನ್ ಸಮಯದಲ್ಲಿ ಕುಟುಂಬಸ್ಥರ ಜೊತೆ ಹೆಚ್ಚು ಕಾಲ ಕಳೆದಿದ್ದ ಈ ನಟ ಸ್ನೇಹಿತರನ್ನು ಮಿಸ್ ಮಾಡಿಕೊಂಡಿದ್ದಾರೆ. ಹೀಗಾಗಿ ಮೆಸೇಜ್ ಮಾಡಿರುವ ಚಿರು ಹಾಯ್ ಸ್ನೇಹಿತರೇ, ನಾನು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನಾವೆಲ್ಲ ಒಂದು ವಾರ ಟ್ರಿಪ್ ಹೋಗೋಣ, ಕಳೆದುಹೋದ ಸಮಯವನ್ನು ಮತ್ತೆ ಪಡೆಯೋಣ. ನಿಮ್ಮ ಜೊತೆಯಲ್ಲಿರುವುದಕ್ಕಿಂತ ಅಮೂಲ್ಯವಾದದ್ದು ಇನ್ನೇನಿಲ್ಲ ಎಂದೆಲ್ಲಾ ಹೇಳಿದ್ದಾರೆ.