ಡ್ರಗ್ಸ್ ಪ್ರಕರಣದ ಮಧ್ಯೆ ಮತ್ತೆ ಮೀ ಟೂ ಅಭಿಯಾನ ಸುದ್ದಿಯಲ್ಲಿದೆ.
2018ರಲ್ಲಿ ಮೀ ಟೂ ಹೆಚ್ಚು ಚರ್ಚೆಯಲ್ಲಿತ್ತು. ಈ ವೇಳೆ ಬಾಲಿವುಡ್ ನಿರ್ಮಾಪಕ ಸಾಜಿದ್ ಖಾನ್ ಸುದ್ದಿಯಲ್ಲಿದ್ದರು. ಸಾಜಿದ್ ಖಾನ್ ವಿರುದ್ಧ ಪತ್ರಕರ್ತೆ ಹಾಗೂ ಇಬ್ಬರು ನಟಿಯರು ಲೈಂಗಿಕ ಕಿರುಕುಳ ಆರೋಪ ಮಾಡಿದ್ದರು. ಘಟನೆ ನಂತ್ರ ಮೀಡಿಯಾಗಳಿಂದ ಸಾಜಿದ್ ದೂರವಿದ್ದಾರೆ. ಹೌಸ್ ಫುಲ್ 4 ಚಿತ್ರದಿಂದಲೂ ಸಾಜಿದ್ ದೂರವಿದ್ದರು.
ಈಗ ಸಾಜಿದ್ ಮೇಲೆ ಮಾಡೆಲ್ ಒಬ್ಬರು ಆರೋಪ ಮಾಡಿದ್ದಾರೆ. ನಟಿ ಹಾಗೂ ಮಾಡೆಲ್ ಪೌಲಾ ಹ್ಯಾಶ್ಟ್ಯಾಕ್ ಮೀ ಟೂ ಅಭಿಯಾನದಲ್ಲಿ ಸಾಜಿದ್ ಮೇಲೆ ಆರೋಪ ಮಾಡಿದ್ದಾಳೆ. ತನಗಾದ ಅನುಭವವನ್ನು ಹಂಚಿಕೊಂಡಿದ್ದಾಳೆ. ಆಕೆ 17 ವರ್ಷದಲ್ಲಿದ್ದಾಗ ಸಾಜಿದ್, ಆಕೆಯನ್ನು ಕೆಟ್ಟದಾಗಿ ಸ್ಪರ್ಶಿಸಲು ಪ್ರಯತ್ನಿಸಿದ್ದನಂತೆ.
ಆಗ ನನಗೆ ಮರ್ಯಾದೆ, ಹಣದ ಅವಶ್ಯಕತೆಯಿತ್ತು. ಹಾಗಾಗಿ ಸುಮ್ಮನಿದ್ದೆ. ಈಗ ನನ್ನ ತಂದೆ-ತಾಯಿ ಇಲ್ಲ. ಧೈರ್ಯವಾಗಿ ನಾನು ಇದ್ರ ಬಗ್ಗೆ ಮಾತನಾಡ್ತಿದ್ದೇನೆ. ಹೌಸ್ ಫುಲ್ ಚಿತ್ರದ ಚಿತ್ರೀಕರಣದ ನಂತ್ರ ತನ್ನ ಮುಂದೆ ಬಟ್ಟೆ ಬಿಚ್ಚಲು ಸಾಜಿದ್ ಹೇಳಿದ್ದ. ಕೆಟ್ಟದಾಗಿ ಸ್ಪರ್ಶಿಸುವ ಪ್ರಯತ್ನ ಮಾಡಿದ್ದ. ಅಶ್ಲೀಲ ಮಾತುಗಳನ್ನು ಆಡ್ತಿದ್ದನೆಂದು ನಟಿ ಹೇಳಿದ್ದಾಳೆ. ಈಕೆ ಪೋಸ್ಟ್ ವೈರಲ್ ಆಗಿದೆ. ಸಾಮಾಜಿಕ ಜಾಲತಾಣ ಬಳಕೆದಾರರು ಸಾಜಿದ್ ಬಂಧಿಸುವಂತೆ ಆಗ್ರಹಿಸಿದ್ದಾರೆ.