ಬಾಲಿವುಡ್ ಮತ್ತು ಸಂಗೀತ ಉದ್ಯಮದಲ್ಲಿ ಹೆಸರು ಪಡೆದಿರುವ ಹಿಮೇಶ್ ರೇಶಮ್ಮಿಯಾ ಸಂದರ್ಶನವೊಂದರಲ್ಲಿ ಖುಷಿ ಸುದ್ದಿ ಹೇಳಿದ್ದಾರೆ. ಲಾಕ್ಡೌನ್ನಲ್ಲಿ ಮನೆಯಲ್ಲಿ ಕುಳಿತಿದ್ದ ಹಿಮೇಶ್ ರೇಶಮ್ಮಿಯಾ ಒಂದೆರಡಲ್ಲ ಬರೋಬ್ಬರಿ 300 ಹೊಸ ಹಾಡುಗಳನ್ನು ರಚಿಸಿದ್ದಾರಂತೆ.
ಹಿಮೇಶ್ ಹೊಸ ಯೋಜನೆಯ ಬಗ್ಗೆ ಸುಳಿವು ನೀಡಿದ್ದಾರೆ. ಇದು ಭಾರತೀಯ ಸಂಗೀತ ಉದ್ಯಮದ ದಿಕ್ಕು ಬದಲಿಸಲಿದೆ ಎನ್ನಲಾಗ್ತಿದೆ. ಇಂಡಿಯನ್ ಎಕ್ಸ್ ಪ್ರೆಸ್ ಜೊತ ಮಾತನಾಡಿದ ಹಿಮೇಶ್, ದೊಡ್ಡ ಪ್ರಾಜೆಕ್ಟ್ ಗಾಗಿ 700 ಹಾಡು ರಚಿಸಿದ್ದೇನೆ. ಲಾಕ್ ಡೌನ್ ಸಂದರ್ಭದಲ್ಲಿ 300 ಹಾಡು ರಚಿಸಿದ್ದೇನೆಂದು ಹೇಳಿದ್ದಾರೆ. ಆದ್ರೆ ದೊಡ್ಡ ಪ್ಲಾನ ಯಾವುದು ಎಂಬುದನ್ನು ಹಿಮೇಶ್ ಹೇಳಿಲ್ಲ.
ಹೊಸ ಪ್ಲಾನ್ ಬಗೆ ಆದಷ್ಟು ಬೇಗ ಹೇಳ್ತೆನೆ. ಇದು ಗೇಮ್ ಚೇಂಜರ್ ಆಗಲಿದೆ ಎಂದು ಹಿಮೇಶ್ ಹೇಳಿದ್ದಾರೆ. ಸದ್ಯ ಮೆಲೋಡಿಯ ಅವಶ್ಯಕತೆಯಿದೆ. ಇದನ್ನು ನೀವು ಇಲ್ಲಿ ಕೇಳಬಹುದು ಎಂದು ಹಿಮೇಶ್ ಹೇಳಿದ್ದಾರೆ.