ಕೊರೊನಾ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಐದನೇ ಹಂತದ ಲಾಕ್ಡೌನ್ ಜೂನ್ 30 ರವರೆಗೆ ಮುಂದುವರೆಯಲಿದೆ. ಇದರ ಮಧ್ಯೆ ಕೆಲ ಮಾರ್ಗಸೂಚಿಗಳೊಂದಿಗೆ ಧಾರ್ಮಿಕ ಮಂದಿರಗಳು, ಮಾಲ್ ಗಳು, ಹೋಟೆಲ್, ರೆಸ್ಟೋರೆಂಟ್ ಆರಂಭಕ್ಕೆ ಅನುಮತಿ ನೀಡಲಾಗಿದ್ದು, ಸೋಮವಾರದಿಂದ ಇವುಗಳು ಆರಂಭವಾಗಿವೆ.
ಆದರೆ ಸಾರ್ವಜನಿಕ ಸಭೆ – ಸಮಾರಂಭ, ಚಿತ್ರಮಂದಿರ ಆರಂಭಕ್ಕೆ ಇನ್ನೂ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ. ಚಿತ್ರೀಕರಣಕ್ಕೆ ಅನುಮತಿ ನೀಡಲಾಗಿದ್ದರೂ ಸಹ ಬಹಳಷ್ಟು ಷರತ್ತುಗಳನ್ನು ವಿಧಿಸಲಾಗಿದೆ. ಹೀಗಾಗಿ ಚಿತ್ರರಂಗದ ಚಟುವಟಿಕೆ ಬಹುತೇಕ ಸ್ತಬ್ಧವಾಗಿದೆ.
ಐದನೇ ಹಂತದ ಲಾಕ್ ಡೌನ್ ಜೂನ್ 30ರಂದು ಅಂತ್ಯಗೊಂಡ ಬಳಿಕ ಜುಲೈ ಮೊದಲ ವಾರದಿಂದ ಚಿತ್ರೀಕರಣ ಹಾಗೂ ಚಿತ್ರಮಂದಿರ ಆರಂಭಿಸಲು ಕೇಂದ್ರ ಸರ್ಕಾರ ಅನುಮತಿ ನೀಡಬಹುದೆಂಬ ನಿರೀಕ್ಷೆಯಲ್ಲಿ ಚಿತ್ರರಂಗವಿದ್ದು, ಹೀಗಾಗಿ ಇದಕ್ಕೆ ಪೂರಕ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.