
ನಂದಕಿಶೋರ್ ನಿರ್ದೇಶನದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ‘ಪೊಗರು’ ಚಿತ್ರದ ಖರಾಬು ಎಂಬ ಹಾಡು ಹೊಸ ದಾಖಲೆಯೊಂದನ್ನು ಸೃಷ್ಟಿಸಿದೆ.
ಈ ಹಾಡು ಯೂಟ್ಯೂಬ್ ನಲ್ಲಿ 151 ಮಿಲಿಯನ್ ವೀಕ್ಷಣೆ ಪಡೆಯುವ ಮೂಲಕ ಕನ್ನಡ ಸಿನಿಮಾ ರಂಗದಲ್ಲಿ ರೆಕಾರ್ಡ್ ಮಾಡಿದೆ.
ಕನ್ನಡ ಚಿತ್ರರಂಗದಲ್ಲಿ 150 ಮಿಲಿಯನ್ ವೀವ್ಸ್ ಪಡೆದಿರುವ ಮೊದಲ ಹಾಡು ಇದಾಗಿದ್ದು, ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಮಿಂಚಲಿದ್ದಾರೆ.