![](https://kannadadunia.com/wp-content/uploads/2021/02/fb0c9c6f-5413-4938-8bd5-8281118675ab.jpg)
ತರುಣ್ ಸುಧೀರ್ ನಿರ್ದೇಶನದ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ರಾಬರ್ಟ್’ ಚಿತ್ರದಲ್ಲಿ ನಟಿಸಿರುವ ಜಗಪತಿ ಬಾಬು ಅವರಿಗೆ ಇಂದು ಜನ್ಮದಿನವಾಗಿದ್ದು, ಅವರ ಫಸ್ಟ್ ಲುಕ್ ಅನ್ನು ‘ರಾಬರ್ಟ್’ ನಿರ್ಮಾಪಕ ಇಂದು ಬಿಡುಗಡೆ ಮಾಡಿದ್ದಾರೆ. ‘ಮದಗಜ’ ಸಿನಿಮಾದಲ್ಲೂ ಜಗಪತಿ ಬಾಬು ಅಭಿನಯಿಸಿದ್ದು ‘ಮದಗಜ’ ಚಿತ್ರತಂಡ ಕೂಡ ಫಸ್ಟ್ ಲುಕ್ ಅನ್ನು ರಿವೀಲ್ ಮಾಡಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ತಮ್ಮ ಇನ್ ಸ್ಟಾಗ್ರಾಂನಲ್ಲಿ ಈ ಪೋಸ್ಟರ್ ಅನ್ನು ಅಪ್ ಲೋಡ್ ಮಾಡುವ ಮೂಲಕ ಜಗಪತಿ ಬಾಬು ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಮಾರ್ಚ್ 11ರಂದು ‘ರಾಬರ್ಟ್’ ಸಿನಿಮಾ ತೆರೆಮೇಲೆ ಬರಲು ಸಜ್ಜಾಗಿದೆ.
https://www.instagram.com/p/CLLc65glGe-/?utm_source=ig_web_copy_link