
ಕನ್ನಡದ ಖ್ಯಾತ ಪತ್ರಕರ್ತ ರವಿ ಬೆಳಗೆರೆ ತೀವ್ರ ಹೃದಯಘಾತದಿಂದ ವಿಧಿವಶರಾಗಿದ್ದು, ಸಾಕಷ್ಟು ಸಿನಿಮಾ ಕಲಾವಿದರು ರವಿ ಬೆಳಗೆರೆ ಅವರಿಗೆ ಸಂತಾಪ ಸೂಚಿಸಿದ್ದಾರೆ. ನವರಸ ನಾಯಕ ಜಗ್ಗೇಶ್ ಕೂಡ ತಮ್ಮ ಟ್ವಿಟ್ಟರ್ ನಲ್ಲಿ ಸಂತಾಪ ಸೂಚಿಸಿದ್ದಾರೆ.
ಯಾರಿಗೂ ಅರ್ಥವಾಗದ ಮನುಷ್ಯ! ಒಮ್ಮೆ ಈತನ ಮಾತು ಸರಿ ಅನ್ನಿಸುತ್ತದೆ! ಕೆಲವೊಮ್ಮೆ ಬೇಕಿತ್ತ ಈ ಮಾತು ಅನ್ನಿಸುತ್ತದೆ! 30 ವರ್ಷದಿಂದಲ್ಲೇ ಬಲ್ಲೆ ಆದರು ನನಗೆ ಅರ್ಥವಾಗದ ಮನುಷ್ಯ! ಸಾಮಾನ್ಯ ಅಸಾಮಾನ್ಯ ಆದದ್ದು ಮಾತ್ರ ಅನುಸರಣೀಯ! ರವಿ ಅವರ ಖಾಸಬಾತ್ ಬರವಣಿಗೆ ನನ್ನ ಅಚ್ಚುಮೆಚ್ಚು! ನಿಮ್ಮ ಆತ್ಮಕ್ಕೆ ಶಾಂತಿ….ಎಂದು ಬರೆದುಕೊಂಡಿದ್ದಾರೆ.