ನಟ ರಮೇಶ್ ಅರವಿಂದ್ ಅವರೊಂದಿಗೆ 20 ವರ್ಷದಿಂದ ಜೊತೆ ಇದ್ದ ಮೇಕಪ್ ಮ್ಯಾನ್ ಸೂರಿಬಾಬು ಭಾನುವಾರ ಇಹಲೋಕ ತ್ಯಜಿಸಿದ್ದು, ಈ ನೋವಿನ ಸಂಗತಿಯನ್ನು ರಮೇಶ್ ಅರವಿಂದ್ ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.
ಸೂರಿ ಬಾಬು 20 ವರ್ಷಗಳಿಂದ ನನ್ನ ಮೇಕಪ್ ಮ್ಯಾನ್. ಅತ್ಯುತ್ತಮ ಕೆಲಸಗಾರ ಶ್ರಮಜೀವಿ. ನಿಷ್ಠಾವಂತ. ನಾನು ನಟಿಸಿದ ಪ್ರತಿ ಶಾಟ್ ಹಿಂದೆ ಅವರ ‘ಟಚ್ ಅಪ್’ ಇರುತ್ತಿತ್ತು ನಿನ್ನೆ ಹೈದರಾಬಾದ್ನಲ್ಲಿ ನಮ್ಮನ್ನು ಬಿಟ್ಟು ಅಗಲಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ರಮೇಶ್ ಅರವಿಂದ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
https://www.instagram.com/p/CEQv9MLJoYQ/?utm_source=ig_embed