
ಮಾಸ್ಟರ್ ಆನಂದ್ ಬಾಲ ಕಲಾವಿದನಾಗಿ ಸಿನಿಮಾ ರಂಗಕ್ಕೆ ಬಂದು ಒಬ್ಬ ಪ್ರತಿಭಾವಂತ ಹಾಸ್ಯ ನಟನಾಗಿ, ನಿರ್ದೇಶಕನಾಗಿ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಇಂದು ಅವರ ಜನ್ಮದಿನವಾಗಿದ್ದು, ನವರಸ ನಾಯಕ ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.
ಆತ್ಮೀಯ ಮಾಸ್ಟರ್ ಆನಂದ್ ಹುಟ್ಟುಹಬ್ಬದ ಶುಭಾಶಯಗಳು….ನಾನು ಪ್ರೀತಿಸುವ ಕೆಲವೇ ಆತ್ಮಗಳಲ್ಲಿ ನೀನು ಒಬ್ಬ…..ನಿನ್ನ ಆಂತರ್ಯದ ಸಕಲ ಆಶೋತ್ತರ ಗುರುರಾಯರು ನೆರವೇರಿಸಲಿ…..god bless:)ಎಂದು ಬರೆದುಕೊಳ್ಳುವ ಮೂಲಕ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.