![Raja Hindustani turns 21: Did you know Aamir Khan consumed one litre of vodka for the film? - bollywood - Hindustan Times](https://m.hindustantimes.com/rf/image_size_960x540/HT/p2/2017/11/14/Pictures/_2e955924-c943-11e7-869c-1f24c33974c8.jpg)
ಬಾಲಿವುಡ್ ನಲ್ಲಿ ಅನೇಕ ಕಲಾವಿದರು ಮದ್ಯಪಾನ ಹಾಗೂ ಧೂಮಪಾನ ವ್ಯಸನಿಗಳಿದ್ದಾರೆ. ಆದ್ರೆ ಶೂಟಿಂಗ್ ವೇಳೆ ಇದಕ್ಕೆ ಅವಕಾಶ ನೀಡುವುದಿಲ್ಲ. ಇದರ ಮಧ್ಯೆಯೂ ಬಾಲಿವುಡ್ ಸೂಪರ್ ಸ್ಟಾರ್ ಮದ್ಯ ಸೇವಿಸಿ ಹಾಡಿನ ಶೂಟಿಂಗ್ ಮಾಡಿದ್ದರು.
ಯಸ್, ಅವ್ರು ಬೇರೆ ಯಾರೂ ಅಲ್ಲ ಬಾಲಿವುಡ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್. ವರ್ಷದಲ್ಲಿ ಒಂದು ಚಿತ್ರವನ್ನು ಮಾಡುವ ಅಮೀರ್ ಸೂಪರ್ ಹಿಟ್ ಚಿತ್ರ ನೀಡ್ತಾರೆ. ಸದ್ಯ ಅಮೀರ್, ಲಾಲ್ ಸಿಂಗ್ ಛಡ್ಡಾ ಬರಲಿದೆ. ಇದಕ್ಕಾಗಿ ಅಭಿಮಾನಿಗಳು ಕಾದು ಕುಳಿತಿದ್ದಾರೆ.
ಅಮೀರ್ ಖಾನ್ ಹಿಂದೆ ಚಿತ್ರವೊಂದರ ಶೂಟಿಂಗ್ ವೇಳೆ ಮದ್ಯಪಾನ ಮಾಡಿದ್ದರು. ಮದ್ಯಪಾನ ಮಾಡದಂತೆ ನಿರ್ದೇಶಕರು ಸೂಚಿಸಿದ್ದರಂತೆ. ಆದ್ರೆ ಪಾತ್ರದಲ್ಲಿ ಸಂಪೂರ್ಣ ತೊಡಗಿಕೊಳ್ಳಬೇಕೆಂದ್ರೆ ಮದ್ಯಪಾನ ಮಾಡಬೇಕೆಂದು ಅಮೀರ್ ಹೇಳಿದ್ದರಂತೆ. ಮದ್ಯಪಾನ ಮಾಡಿ ಅಮೀರ್ ಚಿತ್ರೀಕರಿಸಿದ ಚಿತ್ರದ ಹೆಸರು ʼರಾಜಾ ಹಿಂದೂಸ್ತಾನಿʼ. ಹಾಡು ತೇರೆ ಇಷ್ಕ್ ಮೇ ನಾಚೆಂಗೆ.