
ಬಾಲಿವುಡ್ ನಟ ರಣಬೀರ್ ಕಪೂರ್ ಮತ್ತು ನಟಿ ಆಲಿಯಾ ಭಟ್ ಬಾಲಿವುಡ್ ನ ಪ್ರಸಿದ್ಧ ಜೋಡಿಗಳಲ್ಲಿ ಸ್ಥಾನ ಪಡೆದಿದ್ದಾರೆ. ರಣಬೀರ್ ಹಾಗೂ ಆಲಿಯಾ ಮದುವೆಗೆ ಸಿದ್ಧವಾಗಿದ್ದರು. ಈ ವರ್ಷ ಡಿಸೆಂಬರ್ ನಲ್ಲಿ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಬೇಕಿತ್ತು. ಆದ್ರೆ ಜೋಡಿ ಅಭಿಮಾನಿಗಳಿಗೆ ಮತ್ತೆ ನಿರಾಸೆ ಮಾಡಿದ್ದಾರೆ.
ಮಾಧ್ಯಮಗಳ ವರದಿ ಪ್ರಕಾರ, ಆಲಿಯಾ ಮತ್ತು ರಣಬೀರ್ ಮದುವೆಯನ್ನು ಮುಂದೂಡಲಾಗಿದೆ. 2021ಕ್ಕೆ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದೆ. ಕೊರೊನಾ ವೈರಸ್ ಸೇರಿದಂತೆ ಕೆಲ ಕಾರಣಗಳಿಗೆ ಮದುವೆ ಮುಂದೂಡಲಾಗಿದೆ.
ಕೊರೊನಾ ಮಾತ್ರವಲ್ಲ ಇಬ್ಬರು ಚಿತ್ರದಲ್ಲಿ ಬ್ಯುಸಿಯಿದ್ದಾರೆ. ಇದ್ರಿಂದ ಮದುವೆಗೆ ಸಮಯ ಸಿಗ್ತಿಲ್ಲ. ಹಾಗಾಗಿ ಇಬ್ಬರು ಮಾತನಾಡಿ ಮದುವೆ ಮುಂದೂಡಿದ್ದಾರೆ ಎನ್ನಲಾಗಿದೆ.