ಗಾಯಕ ಸೋನು ನಿಗಮ್ ಹಾಡುಗಳು ಅಂದರೆ ಯಾರಿಗೆ ಇಷ್ಟ ಇಲ್ಲ. ತನ್ನದೇ ಆದ ಶೈಲಿಯಲ್ಲಿ ಅದ್ಭುತ ಧ್ವನಿಯ ಮೂಲಕ ಹಾಡು ಹೇಳುತ್ತಿದ್ದರೆ ತಲೆದೂಗದೇ ಇರೋವ್ರಿಲ್ಲ. ಕನ್ನಡ, ಹಿಂದಿ ಸೇರಿದಂತೆ ಬೇರೆ ಬೇರೆ ಭಾಷೆಯಲ್ಲಿ ಹಾಡಿನ ಮೂಲಕ ಕಮಾಲ್ ಮಾಡಿರುವ ಸೋನು ನಿಗಮ್ ತಮ್ಮ ಮಗನ ಹಾಡುಗಾರಿಕೆ ವಿಚಾರದಲ್ಲಿ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ.
ಹೌದು, ಸಂದರ್ಶನ ಒಂದರಲ್ಲಿ ಮಾತನಾಡಿರುವ ಅವರು, ನನ್ನ ಮಗ ಈ ದೇಶದಲ್ಲಿ ಹಾಡುವುದೇ ಬೇಡ ಎಂಬ ಹೇಳಿಕೆ ನೀಡುವ ಮೂಲಕ ಚರ್ಚೆ ಹುಟ್ಟು ಹಾಕಿದ್ದಾರೆ. ಇದರ ಜೊತೆಗೆ ಮತ್ತೊಂದು ವಿಚಾರವನ್ನು ಹೇಳಿದ ಸೋನು ನಿಗಮ್, ನನ್ನ ಮಗ ಸಿಂಗರ್ ಆಗುವುದು ನನಗೆ ಇಷ್ಟವಿಲ್ಲ ಎಂದಿದ್ದಾರೆ.
ಇನ್ನು ಸೋನು ನಿಗಮ್ ಹೇಳುವ ಪ್ರಕಾರ ಅವರ ಮಗ ಸಂಗೀತಕ್ಕಿಂತ ಬೇರೆ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾನಂತೆ. ನನ್ನ ಮಗ ದುಬೈನಲ್ಲಿ ಇದ್ದಾನೆ. ಅವನೊಬ್ಬ ಟಾಪ್ ಗೇಮರ್. ಅಷ್ಟೆ ಅಲ್ಲ ಅನೇಕ ಪ್ರತಿಭೆಗಳು ಅವನಲ್ಲಿವೆ. ನಾನು ಅವನಿಗೆ ಇದನ್ನೇ ಮಾಡು ಎಂದು ಹೇಳುವುದಿಲ್ಲ. ಅವನಿಗೆ ಯಾವ ಕ್ಷೇತ್ರದಲ್ಲಿ ಇಷ್ಟವಿದೆಯೋ ಅದರಲ್ಲಿ ಅವನು ಮುಂದುವರೆಯಲಿ ಎಂದು ಹೇಳಿದ್ದಾರೆ.