ಈ ಕ್ಯಾಂಡಿಡ್ ಕ್ಷಣಗಳು ಹಾಗೂ ಸ್ವಾಗ್‌ಗಳನ್ನೆಲ್ಲಾ ಬಹಳ ನ್ಯಾಚುರಲ್ ಆಗಿ ನೋಡಬೇಕೆಂದರೆ ಚೂಟಿಯಾಗಿರುವ ಮಕ್ಕಳನ್ನು ಗಮನಿಸಬೇಕು.
ಮೊದಲೇ ಮಕ್ಕಳು ಎಂಬ ಕಾರಣಕ್ಕೆ ಕ್ಯೂಟ್ ಆಗಿ ಕಾಣುವ ಇವರು, ತಮ್ಮ ತುಂಟಾಟಗಳು ಹಾಗೂ ಚಿನ್ನಾಟಗಳ ವೇಳೆ ನೋಡಲಂತೂ ಇನ್ನಷ್ಟು ಮುದ್ದು ಮುದ್ದಾಗಿ ಕಾಣುತ್ತಾರೆ. ಇಂಥ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಕವ್ವಾಲಿ ಹಾಡೊಂದನ್ನು ಕೇಳುತ್ತಾ ಅದಕ್ಕೆ ತಕ್ಕಂತೆ ಕುಳಿತಲ್ಲಿಂದಲೇ ತನ್ನ ಮೈಯನ್ನು ಕುಣಿಸುತ್ತಿರುವ 3-4 ವರ್ಷದ ಪೋರನೊಬ್ಬ ಬಲೇ ಕ್ಯೂಟ್ ಆಗಿ ಕಾಣುತ್ತಿದ್ದಾನೆ. ಟೋಪಿಧಾರಿಯಾಗಿ ಇರುವ ಈ ಪುಟ್ಟ ಬಾಲಕನ ಸ್ವಾಗ್ ಅನ್ನು ಅಲ್ಲಿಯೇ ಕುಳಿತಿದ್ದ ಬೇರೆ ಮಕ್ಕಳೂ ಸಹ ನೋಡಿಕೊಂಡು ಎಂಜಾಯ್ ಮಾಡುತ್ತಿವೆ.