![](https://kannadadunia.com/wp-content/uploads/2020/11/Dimple-Queen-Rachita-who-clarified-marriage-gossip.jpg)
ಸಾಲು ಸಾಲು ಸಿನಿಮಾಗಳು ನಟಿ ರಚಿತಾ ರಾಮ್ ಅವರಿಗೆ ಕೈ ಬೀಸಿ ಕರೆಯುತ್ತಲೇ ಇವೆ. ಇದೀಗ ದೀಪಾವಳಿ ಹಬ್ಬದ ಪ್ರಯುಕ್ತ ‘ಪಂಕಜ ಕಸ್ತೂರಿ’ ಎಂಬ ಹೆಸರಿನೊಂದಿಗೆ ಹೊಸ ಸಿನಿಮಾದ ಫೋಸ್ಟರ್ ಬಿಡುಗಡೆ ಮಾಡಿದ್ದಾರೆ. ಮಯೂರ ರಾಘವೇಂದ್ರ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ರಚಿತಾ ರಾಮ್ ಟೈಟಲ್ ಫೋಸ್ಟರ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ವಿಶೇಷ ಪ್ರಕಟಣೆ ಟೈಟಲ್ ಹೇಳಿದ್ಮೇಲೆ 1st ಲುಕ್ ಬಿಡ್ದೆ ಇದ್ರೆ ಹೆಂಗೇ? ನಾನು ‘ಪಂಕಜ ಕಸ್ತೂರಿ’ಯಾಗಿ ನಿಮ್ಮುಂದೆ ಬರ್ತಿದೀನಿ. ನಿಮ್ಮ ಮನೆ ಮನಸ್ಸಿಗೆ ಬರ ಮಾಡ್ಕೊಳ್ಳಿ ದೀಪಾವಳಿಯನ್ನ ಸೆಲೆಬ್ರೇಟ್ ಮಾಡ್ಕೋಳಿ. ಎಲ್ರಿಗೂ ದೀಪಾವಳಿ ಹಬ್ಬದ ಶುಭಾಶಯಗಳು. ಆಹ್ ಆಮೇಲೆ ಟಿಫನ್ ಬಾಕ್ಸ್ ನಲ್ಲಿ ಏನಿದೆ ಅಂತ ಗೆಸ್ ಮಾಡ್ತಿರಿ ನಿಮ್ಮ ರಚಿತಾ ರಾಮ್ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
![](https://kannadadunia.com/wp-content/uploads/2020/11/cf4bdc3f-fd6d-4f04-b70c-cfebb779b625.jpg)