
ವಿಜಯ್ ಕುಮಾರ್ ಕೊಂಡ ನಿರ್ದೇಶನದ ನಿಖಿಲ್ ಕುಮಾರಸ್ವಾಮಿ ನಟನೆಯ ‘ರೈಡರ್’ ಚಿತ್ರದ ಟೀಸರ್ ಅನ್ನು ಇಂದು ಲಹರಿ ಮ್ಯೂಸಿಕ್ ಚಾನೆಲ್ ನಲ್ಲಿ ರಿಲೀಸ್ ಮಾಡಿದ್ದು, ಈ ಟೀಸರ್ ಗೆ ನಿಖಿಲ್ ಕುಮಾರಸ್ವಾಮಿ ಅಭಿಮಾನಿಗಳು ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಚಂದ್ರು ಮನೋಹರನ್ ‘ರೈಡರ್’ ಚಿತ್ರವನ್ನು ನಿರ್ಮಿಸಿದ್ದು ಇಂದು ನಿಖಿಲ್ ಕುಮಾರಸ್ವಾಮಿ ಅವರ ಹುಟ್ಟುಹಬ್ಬದ ಪ್ರಯುಕ್ತ ಈ ಸಿನಿಮಾ ಟೀಸರ್ ಅನ್ನು ಬಿಡುಗಡೆ ಮಾಡಿದ್ದಾರೆ. 45 ಸೆಕೆಂಡ್ ನ ಟೀಸರ್ ನಲ್ಲಿ ಫೈಟಿಂಗ್ ಸೀನ್ ತೋರಿಸಿದ್ದಾರೆ. ಈಗಾಗಲೇ ಈ ಟೀಸರ್ ಸಾಕಷ್ಟು ವೀಕ್ಷಣೆಯನ್ನು ಪಡೆದುಕೊಂಡಿದೆ.