
ಮಹೇಶ್ ಕುಮಾರ್ ನಿರ್ದೇಶನದ ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆಯ ಮದಗಜ ಚಿತ್ರದ ತೆಲುಗು ಟೀಸರ್ ಅನ್ನು ಜನವರಿ 1ರಂದು ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ.
ಡಿಸೆಂಬರ್ 17ರಂದು ಶ್ರೀಮುರಳಿ ಹುಟ್ಟುಹಬ್ಬದ ದಿನದಂದು ‘ಮದಗಜ’ ಚಿತ್ರದ ಕನ್ನಡ ವರ್ಶನ್ ಟೀಸರ್ ರಿಲೀಸ್ ಮಾಡಿದ್ದರು ಇದಕ್ಕೆ ಸಿನಿಪ್ರಿಯರಿಂದ ಉತ್ತಮ ಪ್ರತಿಕ್ರಿಯೆಗಳು ದೊರೆತಿದ್ದವು ಇದೀಗ ಹೊಸ ವರ್ಷದ ಪ್ರಯುಕ್ತ ‘ಮದಗಜ’ ಚಿತ್ರದ ತೆಲುಗಿನ ಟೀಸರ್ ಬಿಡುಗಡೆಯಾಗಲಿದೆ ಈ ಚಿತ್ರದಲ್ಲಿ ಆಶಿಕಾ ರಂಗನಾಥ್ ನಾಯಕಿಯಾಗಿ ನಟಿಸಿದ್ದು, ಈ ಸಿನಿಮಾಗೆ ಉಮಾಪತಿ ಶ್ರೀನಿವಾಸ್ ಗೌಡ ಬಂಡವಾಳ ಹೂಡಿದ್ದಾರೆ.