![](https://kannadadunia.com/wp-content/uploads/2020/11/a381e986-f3e2-44c8-9c27-291d5da45800.jpg)
ಕೊರೋನಾ ಮಹಾಮಾರಿಯಿಂದ ಮುಚ್ಚಲಾಗಿದ್ದ ಸಿನಿಮಾ ಥಿಯೇಟರ್ ಗಳನ್ನು ಓಪನ್ ಮಾಡಿದ್ದು, ಥಿಯೇಟರ್ ಗಳಲ್ಲಿ ಬಂದು ಹೋದ ಸಿನಿಮಾಗಳನ್ನೆ ಮರು ಬಿಡುಗಡೆ ಮಾಡಿದ್ದರು. ಇದೀಗ ಹೊಸ ಸಿನಿಮಾಗಳು ಚಿತ್ರಮಂದಿರಕ್ಕೆ ಎಂಟ್ರಿ ಕೊಡುತ್ತಿವೆ.
ಪ್ರಬಿಕ್ ಮೊಗವೀರ್ ನಿರ್ದೇಶನದ ‘ಗಡಿಯಾರ’ ಎಂಬ ಹೊಸ ಚಿತ್ರ ನವೆಂಬರ್ 27ರಂದು ರಿಲೀಸ್ ಆಗುತ್ತಿದೆ ಈ ಚಿತ್ರದಲ್ಲಿ ಶೀತಲ್ ಶೆಟ್ಟಿ, ಸುಚೇಂದ್ರ ಪ್ರಸಾದ್, ಶರತ್ ಲೋಹಿತಾಶ್ವ, ರಾಜ್ ದೀಪಕ್ ಶೆಟ್ಟಿ, ಗಣೇಶ್ ರಾವ್, ಪ್ರದೀಪ್ ಪೂಜಾರಿ ಮುಂತಾದ ಕಲಾವಿದರು ಚಿತ್ರದಲ್ಲಿ ನಟಿಸಿದ್ದು ನವೆಂಬರ್ 27ರಂದು ರಾಜ್ಯಾದ್ಯಂತ ಈ ಸಿನಿಮಾವನ್ನು ರಿಲೀಸ್ ಮಾಡುತ್ತಿದ್ದಾರೆ.