ಕೊರೊನಾ ಸದ್ಯ ಯಾರನ್ನೂ ಬಿಡ್ತಿಲ್ಲ. ಬಾಲಿವುಡ್ ಗೆ ಕೊರೊನಾ ಕಾಡ್ತಿದೆ. ಅಮಿತಾಬ್ ಬಚ್ಚನ್ ಮತ್ತು ಅವರ ಮಗ ಅಭಿಷೇಕ್ ಬಚ್ಚನ್ ಗೆ ಪಾಸಿಟಿವ್ ಬಂದ ನಂತ್ರ ನಟ ಅನುಪಮ್ ಖೇರ್ ಮನೆಗೂ ಕೊರೊನಾ ಬಂದಿದೆ. ಅನುಪಮ್ ಖೇರ್ ಅವರ ತಾಯಿ ಮತ್ತು ಸಹೋದರ ಸೇರಿದಂತೆ ಕುಟುಂಬದ ನಾಲ್ವರು ಸದಸ್ಯರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ.
ಅನುಪಮ್ ಖೇರ್ ಭಾನುವಾರ ಬೆಳಿಗ್ಗೆ ಟ್ವೀಟ್ ಮಾಡುವ ಮೂಲಕ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಕೆಲವು ದಿನಗಳಿಂದ ತಾಯಿ ಆರೋಗ್ಯ ಹದಗೆಟ್ಟಿದೆ ಎಂದು ಅನುಪಮ್ ವಿಡಿಯೋದಲ್ಲಿ ತಿಳಿಸಿದ್ದರು. ವೈದ್ಯರ ಸಲಹೆಯ ಮೇರೆಗೆ ತಾಯಿಯ ರಕ್ತ ಪರೀಕ್ಷೆ ಮಾಡಿದ್ದರಂತೆ. ಸಿಟಿ ಸ್ಕ್ಯಾನ್ ನಡೆಸಿದ ನಂತ್ರ ಕೋವಿಡ್ -19 ದೃಢಪಟ್ಟಿದೆ.
ಸದ್ಯ ಅನುಪಮ್ ಖೇರ್ ಮನೆ ಸದಸ್ಯರಿಗೆ ಚಿಕಿತ್ಸೆ ಮುಂದುವರೆದಿದೆ. ಕೋಕಿಲಾಬೆನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.