ಮುಂಬೈ: ಡಾನ್ಸಿಂಗ್ ಸ್ಟಾರ್, ನಟ, ನಿರ್ದೇಶಕ ಪ್ರಭುದೇವ ಮತ್ತೊಂದು ವಿವಾಹವಾಗಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಸದ್ದು ಮಾಡಿದೆ. ಪ್ರಭುದೇವ ಸೆಪ್ಟೆಂಬರ್ ನಲ್ಲೇ ಫಿಜಿಯೋಥೆರಪಿಸ್ಟ್ ಒಬ್ಬರನ್ನು ವಿವಾಹವಾಗಿದ್ದಾರೆ ಎಂಬ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬಂದಿದೆ.
ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದ ಪ್ರಭುದೇವ ಚಿಕಿತ್ಸೆಗೆಂದು ಬಿಹಾರ ಮೂಲದ ಫಿಜಿಯೋಥೆರಪಿಸ್ಟ್ ಬಳಿ ಹೋಗಿದ್ದು, ಈ ವೇಳೆ ಇಬ್ಬರಿಗೂ ಪ್ರೇಮಾಂಕುರವಾಗಿದೆ. ಸೆಪ್ಟೆಂಬರ್ ನಲ್ಲಿ ಪ್ರಭುದೇವ ಫಿಜಿಯೋಥೆರಪಿಸ್ಟ್ ಜೊತೆ ವಿವಾಹವಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಪ್ರಭುದೇವ ಹಾಗೂ ಅವರ ಪತ್ನಿ ಚೆನ್ನೈನ ನಿವಾಸದಲ್ಲಿ ವಾಸವಾಗಿದ್ದಾರೆ ಎನ್ನಲಾಗುತ್ತಿದೆ. ಆದರೆ ಪ್ರಭುದೇವ ತಮ್ಮ ಎರಡನೇ ಮದುವೆ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ನೀಡಿಲ್ಲ.