
ಕೆ. ಕಲ್ಯಾಣ್ ಕುಟುಂಬದಲ್ಲಿ ಬಿರುಕು ಮೂಡಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಗೊತ್ತೇ ಇದೆ. ಗಂಗಾ ಕುಲಕರ್ಣಿ ಎಂಬಾಕೆಯಿಂದ ಇಡೀ ಕುಟುಂಬದಲ್ಲಿ ದೊಡ್ಡ ಅಸಮಾಧಾನ ಹಾಗೂ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿತ್ತು. ಆದರೆ ಇದೀಗ ಈ ಕುಟುಂಬದ ಸಮಸ್ಯೆ ಸುಖಾಂತ್ಯ ಕಂಡಿದೆ.
ಹೌದು, ಕೆ.ಕಲ್ಯಾಣ್ ಈ ಬಗ್ಗೆ ಮಾತನಾಡಿದ್ದು, ನನ್ನ ಕುಟುಂಬ ಮರಳಿದೆ. ಬೇರೆಯವರಿಂದ ಹಾಳಾಗುತ್ತಿದ್ದ ನನ್ನ ಕುಟುಂಬದಲ್ಲಿ ಇದೀಗ ಸಂತಸ ಮೂಡಿದೆ. ನನ್ನ ಪತ್ನಿ, ಅತ್ತೆ ಹಾಗೂ ಮಾವ ಮನೆಗೆ ಮರಳಿದ್ದಾರೆ. ಇದಕ್ಕೆ ನಾನು ಬೆಳಗಾವಿ ಪೊಲೀಸರಿಗೆ ಧನ್ಯವಾದ ಹೇಳುತ್ತೇನೆ. ಕಷ್ಟದ ಸಮಯದಲ್ಲಿ ಪರಿಸ್ಥಿತಿ ಅರಿತು ಸೂಕ್ಷ್ಮವಾಗಿ ಅದನ್ನು ನಿಭಾಯಿಸಿದ್ದರಿಂದ ಇಂದು ನನಗೆ ನನ್ನ ಕುಟುಂಬ ಮರಳಿ ದಕ್ಕಿದೆ ಎಂದಿದ್ದಾರೆ.
ಇನ್ನು ಮನೆ ಕೆಲಸದವರ ಬಗ್ಗೆ ಕಿವಿಮಾತನ್ನು ಹೇಳಿದ್ದಾರೆ. ಗೊತ್ತಿಲ್ಲದೇ ಇರುವ ವ್ಯಕ್ತಿಗಳನ್ನು ಮನೆ ಕೆಲಸಕ್ಕೆ ಸೇರಿಸಿಕೊಳ್ಳಬೇಡಿ. ಪೂರ್ವಪರ ಯೋಚನೆ ಮಾಡಿಯೇ ಅವರನ್ನು ಕೆಲಸಕ್ಕೆ ತೆಗೆದುಕೊಳ್ಳಿ ಎಂದಿದ್ದಾರೆ. ತಪ್ಪಿತಸ್ಥರಿಗೆ ಶಿಕ್ಷೆ ಆಗಲೇ ಬೇಕು ಎಂದು ಹೇಳಿದ್ದಾರೆ.