![](https://kannadadunia.com/wp-content/uploads/2021/01/ee7e49c3-6eb5-480b-8c56-77e38e23a641.jpg)
ಪುರಿ ಜಗನ್ನಾಥ್ ನಿರ್ದೇಶನದ ವಿಜಯ್ ದೇವರಕೊಂಡ ನಟನೆಯ ‘ಲೈಗರ್’ ಚಿತ್ರದ ಫಸ್ಟ್ ಲುಕ್ ಅನ್ನು ಬಿಡುಗಡೆ ಮಾಡಿದ್ದು, ವಿಜಯ್ ದೇವರಕೊಂಡ ಫ್ಯಾನ್ಸ್ ಗಳು ಒಂದೊಂದು ರೀತಿ ಅಭಿಮಾನ ತೋರಿಸುತ್ತಿದ್ದಾರೆ.
ಕೆಲವರು ಲೈಗರ್ ಹೆಸರನ್ನು ಟ್ಯಾಟೂ ಹಾಕಿಸಿಕೊಂಡಿದ್ದರೆ ಇನ್ನು ಕೆಲವರು ಬಿಯರ್ ಅನ್ನು ಪೋಸ್ಟರ್ ಗೆ ಸುರಿದು ಆನಂದಿಸಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ಸಂಸ್ಥೆಯಿಂದ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಅನನ್ಯ ಪಾಂಡೆ ನಾಯಕಿಯಾಗಿ ಮಿಂಚಲಿದ್ದಾರೆ. ಐದು ಭಾಷೆಯಲ್ಲಿ ಈ ಚಿತ್ರ ರಿಲೀಸ್ ಮಾಡಲಿದ್ದಾರೆ.
![](https://kannadadunia.com/wp-content/uploads/2021/01/02fd19d1-7759-46f7-93de-1e386ffea1a4.jpg)
![](https://kannadadunia.com/wp-content/uploads/2021/01/d99be533-6516-4fba-a3f4-40ac234f0ebe.jpg)