ಇಂದು ನವರಸ ನಾಯಕ ಜಗ್ಗೇಶ್ ಅವರ ಹಿರಿಯ ಪುತ್ರ ಗುರುರಾಜ್ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಅವರ ಹುಟ್ಟುಹಬ್ಬಕ್ಕೆ ಜಗ್ಗೇಶ್ ಸಾಮಾಜಿಕ ಜಾಲತಾಣಗಳಲ್ಲಿ ಕೆಲ ಸಾಲುಗಳನ್ನು ಬರೆದುಕೊಳ್ಳುವ ಮೂಲಕ ಹುಟ್ಟು ಹಬ್ಬದ ಶುಭಾಶಯ ತಿಳಿಸಿದ್ದಾರೆ.
ಪ್ರತಿ ತಂದೆಗೆ ತನ್ನ ಮಗ ಹುಟ್ಟಿದಾಗ ಏನೇನೋ ಕೊಡಿಸಬೇಕು! ಮಗುವಿಗೆ ಬೇರೆ ಯಾರೂ ಮಾಡದ ರೀತಿ ವಿಶೇಷ ತಂದೆಯಾಗಿ ನಿರೂಪಿಸಬೇಕು! ಎಂದು ಎಷ್ಟು ಕನಸುಗಳು ಇರುತ್ತದೆ. ಅದೇ ಕನಸು ನನಗೂ ಇತ್ತು! ಆದರೆ ನನಗೆ ದುಡಿಮೆಯಿಲ್ಲಾ ಹಣವಿಲ್ಲ ಅಂತಹ ದುರಾದೃಷ್ಟಕರ ಸಮಯದಲ್ಲಿ ಮಗ 5/1/ 87ರಂದು ಹುಟ್ಟಿದ! ಆಗ ನಾನು 24ವರ್ಷದ Young father..!!
ಗುರುರಾಜ ಎಂದು ನಾಮಕರಣ ಮಾಡಿ! ಅವನು ಹುಟ್ಟಿದ ದಿನ ನನಗೆ ಕೆಟ್ಟ ಹಟ ಹುಟ್ಟಿತು ಅಂದಿನಿಂದ ಇವನ ಜೊತೆಯಲ್ಲೇ ಯಶಸ್ಸು ಗಳಿಸುತ್ತಾ ನಾನು ಬೆಳೆದೆ! ಪಾಪ ಇವ ಹುಟ್ಟಿದಾಗ ನನ್ನ ಕಷ್ಟ ಕಾಲಕ್ಕೆ ನಾನು ವಿಶೇಷವಾಗಿ ಏನೂ ಮಾಡಲು ಆಗಲಿಲ್ಲವೇ ಎಂಬ ಕೊರಗು ನನಗೆ ಇಂದಿಗೂ ಕಾಡುತ್ತದೆ! ಆದರೆ ರಾಯರ ದಯೇ ಗುರುರಾಜ ಸಂಭಾವಿತ ಶಿಸ್ತಿನ ಮಗ…..ಯಾವುದಕ್ಕೂ ಆತುರವಿಲ್ಲ ತನ್ನ ಪಾಡಿಗೆ ತನ್ನ ವ್ಯವಹಾರ cinema #golf ಆಡುತ್ತಾ ಮಡದಿ ಮಗ ಅಪ್ಪ ಅಮ್ಮ ಯತಿರಾಜನ ಜೊತೆ ನೆಮ್ಮದಿಯಾಗಿ ಬಾಳುತ್ತಿದ್ದಾನೆ! ನನ್ನ ಮುದ್ದು ಮಗನಿಗೆ ಹುಟ್ಟುಹಬ್ಬದ ಶುಭಾಶಯಗಳು…..God bless ಮಗನೆ ಎಂದು ಬರೆದುಕೊಂಡಿದ್ದಾರೆ.
https://www.instagram.com/p/CJpmGm0sDVX/?utm_source=ig_web_copy_link