ಮೈಸೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸದಾ ತಮ್ಮ ಸರಳತೆಯಿಂದಲೇ ಅಭಿಮಾನಿಗಳ ಮನಗೆಲ್ಲುತ್ತಾರೆ. ಇದೀಗ ಮತ್ತೊಮ್ಮೆ ಶಿವಣ್ಣನ ಸಿಂಪ್ಲಿಸಿಟಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಸಾಂಸ್ಕೃತಿಕ ನಗರಿ ಮೈಸೂರಿಗೆ ಭೇಟಿ ನೀಡಿರುವ ಶಿವಣ್ಣ, ಪುಟ್ ಪಾತ್ ನಲ್ಲಿದ್ದ ಅಂಗಡಿಯಲ್ಲಿ ಚಹಾ ಕುಡಿದು ಸರಳತೆ ಮೆರೆದಿದ್ದಾರೆ. ಇಲ್ಲಿನ ಮಾತೃ ಮಂಡಳಿ ಸರ್ಕಲ್ ನಲ್ಲಿದ್ದ ಪುಟ್ ಪಾತ್ ಅಂಗಡಿಗೆ ಭೇಟಿ ನೀಡಿದ ಶಿವಣ್ಣ, ಅಲ್ಲಿಯೇ ರಸ್ತೆ ಬದಿಯಲ್ಲಿ ಕುಳಿತು ಟೀ ಸವಿದಿದ್ದಾರೆ.
ಇದೇ ವೇಳೆ ಅಭಿಮಾನಿಗಳ ಫೋಟೋಗೆ ಪೋಸ್ ನೀಡಿದ ಸೆಂಚುರಿ ಸ್ಟಾರ್ ಕೆಲ ಸಮಯ ಅಲ್ಲಿಯೇ ಕಾಲ ಕಳೆದಿದ್ದಾರೆ.