![](https://kannadadunia.com/wp-content/uploads/2021/01/e5e01d72-3b5c-43c2-87db-4f146bff30a6.jpg)
ನಟ ಹಾಗೂ ನಿರ್ದೇಶಕರಾದ ರಿಷಬ್ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಫುಲ್ ಆ್ಯಕ್ಟಿವ್ ಆಗಿರ್ತಾರೆ. ತಮ್ಮ ಸಿನಿಮಾ ಹಾಗೂ ವೈಯಕ್ತಿಕ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.
ರಿಷಬ್ ಶೆಟ್ಟಿ ಅವರ ಮಗ ಎದ್ದು ನಿಂತು ಓಡಾಡಲು ಪ್ರಯತ್ನಿಸಿದ್ದಾನೆ. ಈ ಸಂತೋಷವನ್ನು ರಿಷಬ್ ಶೆಟ್ಟಿ ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್ ನಲ್ಲಿ ಹಂಚಿಕೊಳ್ಳುವ ಮೂಲಕ ಕೆಲ ಸಾಲುಗಳನ್ನು ಬರೆದುಕೊಂಡಿದ್ದಾರೆ.
ಮುಗ್ದತೆಯೊಂದು ಅಂಬೆಗಾಲಿನಿಂದ ಪುಟ್ಟ ಪುಟ್ಟ ಹೆಜ್ಜೆಗಳಾಗಿ ಬಡ್ತಿ ಪಡೆಯುತ್ತೆ. ಮಮತೆಯೊಂದು ಅಪ್ಪಿಕೊಂಡು ಮುದದಿಂದ ಮುದ್ದಿಸುತ್ತೆ. ಅಕ್ಕರೆಯೊಂದು ಅದನ್ನು ಹೆಮ್ಮೆಯಿಂದ ಹೆಗಲಿಗೇರಿಸುತ್ತೆ. ಇದೆಲ್ಲದರ ಸುತ್ತಲೂ ಪ್ರೀತಿಯೊಂದು ಗೂಡು ಕಟ್ಟಿ ನಸುನಗುತ್ತೆ ಎಂದು ಬರೆದುಕೊಂಡಿದ್ದಾರೆ.