
ಹರಿಯಾಣದಲ್ಲಿ ಇಂಟರ್ನೆಟ್ ವ್ಯವಸ್ಥೆ ಬಂದ್ ಮಾಡಿದ ಬಗ್ಗೆ ಸಿಎನ್ಎನ್ ನೀಡಿದ ವರದಿಯನ್ನ ಶೇರ್ ಮಾಡಿ ಟ್ವೀಟ್ ಮಾಡಿದ್ದ ರಿಹನ್ನಾ ನಾವೇಕೆ ಇದರ ಬಗ್ಗೆ ಮಾತನಾಡುತ್ತಿಲ್ಲ..? ಎಂದು ಪ್ರಶ್ನೆ ಮಾಡಿದ್ದರು.
ರಿಹನ್ನಾರ ಈ ಟ್ವೀಟ್ ಕೆಲವೇ ಗಂಟೆಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿತ್ತು. ಅಲ್ಲದೇ ಅನೇಕ ಸ್ಟಾರ್ ಸೆಲೆಬ್ರಿಟಿಗಳು, ಸಾಮಾಜಿಕ ಕಾರ್ಯಕರ್ತರು ಹಾಗೂ ರಾಜಕಾರಣಿಗಳು ಈಕೆಯ ಟ್ವೀಟ್ಗೆ ರಿ ಟ್ವೀಟ್ ಕೂಡ ಮಾಡಿದ್ದರು. ಇತ್ತ ಕಂಗನಾ ಕೂಡ ಇದೇ ವಿಚಾರವಾಗಿ ರಿ ಟ್ವೀಟ್ ಮಾಡಿ ಪಾಪ್ ಗಾಯಕಿಯನ್ನ ಮೂರ್ಖಿ ಅಂತಲೂ ಪ್ರತಿಭಟನಾ ನಿರತ ರೈತರನ್ನ ಉಗ್ರರು ಎಂದು ಜರಿದಿದ್ದಾರೆ.
ಯಾರು ಕೂಡ ಈ ವಿಚರವಾಗಿ ಏಕೆ ಮಾತನಾಡ್ತಿಲ್ಲ ಅಂದರೆ ಪ್ರತಿಭಟನಾನಿರತರ್ಯಾರೂ ರೈತರಲ್ಲ ಬದಲಾಗಿ ಉಗ್ರರಾಗಿದ್ದಾರೆ. ಅವರು ಭಾರತವನ್ನ ಇಬ್ಭಾಗ ಮಾಡೋಕೆ ಹೊರಟಿದ್ದಾರೆ. ಒಡೆದು ಚೂರಾದ ಭಾರತವನ್ನ ವಶಕ್ಕೆ ತೆಗೆದುಕೊಂಡು ಅಮೆರಿಕದಲ್ಲಿ ಮಾಡಿದಂತೆಯೇ ಚೀನಾ ಚೈನೀಸ್ ಕಾಲೋನಿಗಳನ್ನ ನಿರ್ಮಾಣ ಮಾಡುವ ಪ್ಲಾನ್ನಲ್ಲಿದೆ. ಮೂರ್ಖಿ ನೀನು ಸುಮ್ಮನೇ ಇರು. ನಿಮ್ಮಂತೆ ನಾವು ದೇಶ ಮಾರುವವರಲ್ಲ ಎಂದು ಕಂಗನಾ ಟ್ವೀಟಾಯಿಸಿದ್ದಾರೆ.
ಕಂಗನಾ ಈ ರೀತಿ ಟ್ವೀಟ್ ಮಾಡಿದ್ದೇ ತಡ ನೆಟ್ಟಿಗರು ಆಕೆಯ ಕಾಲೆಳೆಯೋಕೆ ಶುರು ಮಾಡಿದ್ದಾರೆ. ಕೆಲವರು ಸಿಂಹಿಣಿ ವಾಪಸ್ಸಾಗಿದೆ ಎಂದು ಹೇಳಿದ್ರೆ.. ಇನ್ನೊಬ್ಬ ಟ್ವೀಟಿಗ, ಸಹೋದರಿ, ನಿನ್ನ ಬಗ್ಗೆ ಬಹಳ ಹೆಚ್ಚಾಗಿಯೇ ಭಾವಿಸಿಕೊಳ್ಳುತ್ತಿದ್ದೀಯಾ. ಪಾಪ್ ಗಾಯಕಿಗೆ ನಿನ್ನಂತ ಒಬ್ಬ ವ್ಯಕ್ತಿ ಭೂಮಿ ಮೇಲೆ ಇದ್ದಾರೆ ಅನ್ನೋದು ಗೊತ್ತಿರಲಿಕ್ಕಿಲ್ಲ ಎಂದು ಬರೆದಿದ್ದಾರೆ.

