ಬೆಂಗಳೂರು: ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ಗೂಗ್ಲಿ ಹಾಗೂ ನಟಸಾರ್ವಭೌಮ ಚಿತ್ರದ ಖ್ಯಾತಿಯ ನಿರ್ದೇಶಕ ಪವನ್ ಒಡೆಯರ್ ಹಾಗೂ ನಟಿ ಅಪೇಕ್ಷಾ ಪುರೋಹಿತ್ ಗೆ ಗಂಡು ಮಗುವಾಗಿದೆ.
ಹುಟ್ಟುಹಬ್ಬದ ಸಂಭ್ರದಲ್ಲಿದ್ದ ನಿರ್ದೇಶಕ ಪವನ್ ಒಡೆಯರ್ ಗೆ, ಪತ್ನಿ ಅಪೇಕ್ಷಾ ಗಂಡು ಮಗುವಿಗೆ ಜನ್ಮ ನೀಡಿದ್ದು, ದಂಪತಿಯ ಸಂಭ್ರಮ ಇಮ್ಮಡಿಯಾಗಿದೆ. ಈ ಕುರಿತು ಪತ್ನಿ ಅಪೇಕ್ಷಾ ಜೊತೆ ಆಸ್ಪತ್ರೆಯಲ್ಲಿರುವ ಫೋಟೋವನ್ನು ಶೇರ್ ಮಾಡಿರುವ ಪವನ್ ಒಡೆಯರ್, ಹುಟ್ಟುಹಬ್ಬದ ದಿನವೇ ನನಗೆ ಅದ್ಭುತವಾದ ಗಿಫ್ಟ್ ಸಿಕ್ಕಿದೆ. ಗಂಡು ಮಗು ಜನಿಸಿದ್ದು, ಜೈ ಚಾಮುಂಡೇಶ್ವರಿ ಎಂದು ಟ್ವೀಟ್ ಮಾಡಿದ್ದಾರೆ.
ಅಭಿಮಾನಿಗಳು, ನಟ-ನಟಿಯರು, ಸ್ನೇಹಿತರು ನಿರ್ದೇಶಕ ಒಡೆಯರ್ ಹಾಗೂ ಅಪೇಕ್ಷಾಗೆ ಶುಭಾಷಯಗಳ ಸುರಿಮಳೆಗೈದಿದ್ದಾರೆ.