![](https://kannadadunia.com/wp-content/uploads/2021/05/cc6daa66-e5b2-40bb-b41a-d4e85b7c92fc.jpg)
ವಿಜಯ ರಾಘವೇಂದ್ರ ಹಾಗೂ ರಾಧಿಕಾ ಕುಮಾರಸ್ವಾಮಿ ಅಭಿನಯದ ನಿನಗಾಗಿ ಸಿನಿಮಾ 2002 ಮೇ 3ರಂದು ರಾಜ್ಯಾದ್ಯಂತ ಬಿಡುಗಡೆ ಮಾಡಲಾಗಿತ್ತು. ಈ ಚಿತ್ರ ರಿಲೀಸ್ ಆಗಿ ಇಂದಿಗೆ 19 ವರ್ಷಗಳು ಕಳೆದಿವೆ.
ಎಸ್. ಮಹೇಂದರ್ ನಿರ್ದೇಶನದ ಈ ಚಿತ್ರದಲ್ಲಿ ವಿಶಾಲ್ ಹೆಗ್ಡೆ, ಅವಿನಾಶ್, ರಾಮಕೃಷ್ಣ, ತಾರ, ಸೇರಿದಂತೆ ಹಲವಾರು ಕಲಾವಿದರು ಅಭಿನಯಿಸಿದ್ದರು. ರಾಧಿಕಾ ಕುಮಾರಸ್ವಾಮಿ ಅವರ ಮೊದಲನೇ ಸಿನಿಮಾ ಇದಾಗಿದ್ದು ಸೂಪರ್ ಡೂಪರ್ ಹಿಟ್ ಕೂಡ ಆಗಿತ್ತು. ಉಷಾ ಕಿರಣ್ ಬ್ಯಾನರ್ ನಿಂದ ರಾಮೋಜಿ ರಾವ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದರು ಈ ಸಿನಿಮಾ ಹಾಡುಗಳು ಸಾಕಷ್ಟು ಜನಪ್ರಿಯತೆ ಪಡೆದಿದ್ದವು.