![](https://kannadadunia.com/wp-content/uploads/2020/09/aparhan-actor-arunoday-singh-and-wife-lee-elton-to-get-divorced.jpg)
ಬಾಲಿವುಡ್ ನಟ ಅರುಣೋದಯ್ ಸಿಂಗ್ ಮತ್ತು ಅವರ ಕೆನಡಾದ ಪತ್ನಿ ಲೀ ಎಲ್ಟನ್ ವಿಚ್ಛೇದನದ ಅರ್ಜಿ ವಿಚಾರಣೆ ಜಬಲ್ಪುರ್ ಹೈಕೋರ್ಟ್ ನಲ್ಲಿ ನಡೆದಿದೆ. ಅರುಣೋದಯ್ ಹಾಗೂ ಲೀ ಮಧ್ಯೆ ನಾಯಿ ಕಾರಣಕ್ಕೆ ಶುರುವಾದ ಗಲಾಟೆ ವಿಚ್ಛೇದನದವರೆಗೆ ಬಂದು ನಿಂತಿದೆ.
ಇಂದು ಪ್ರಕರಣದ ವಿಚಾರಣೆ ನಡೆಸಿದೆ ಹೈಕೋರ್ಟ್, ಭೋಪಾಲ್ ಕುಟುಂಬ ನ್ಯಾಯಾಲಯದ ದಾಖಲೆಯನ್ನು ಕೋರಿದೆ. ಮುಂದಿನ ವಿಚಾರಣೆ ಅಕ್ಟೋಬರ್ 6 ರಂದು ನಡೆಯಲಿದೆ. ವಿಚ್ಛೇನದಕ್ಕೆ ಅರ್ಜಿ ಸಲ್ಲಿಸಿರುವುದು ನನಗೆ ತಿಳಿದಿರಲಿಲ್ಲವೆಂದು ಲೀ ಹೇಳಿದ್ದಾರೆ.
ಅರುಣೋದಯ್ ಸಿಂಗ್ ಮಧ್ಯಪ್ರದೇಶದ ಕಾಂಗ್ರೆಸ್ ಮುಖಂಡ ಅಜಯ್ ಸಿಂಗ್ ಅವರ ಪುತ್ರ. ಇದು ಏಕಪಕ್ಷೀಯ ವಿಚ್ಛೇದನದ ಅರ್ಜಿ ಎನ್ನಲಾಗಿದೆ. ಅರುಣೋದಯ್ ಹಾಗೂ ಲೀ 2016ರಲ್ಲಿ ಮದುವೆಯಾಗಿದ್ದರು. ಕೆಲವೇ ದಿನಗಳಲ್ಲಿ ಇಬ್ಬರ ಮಧ್ಯೆ ಗಲಾಟೆ ಶುರುವಾಗಿತ್ತು. ಲೀ ಸಾಕಿದ್ದ ನಾಯಿ ಹಾಗೂ ಅರುಣೋದಯ್ ಸಾಕಿದ್ದ ನಾಯಿ ಮಧ್ಯೆ ನಡೆದ ಗಲಾಟೆ ಇಬ್ಬರ ಮಧ್ಯೆ ಬಿರುಕು ಮೂಡಿಸಲು ಕಾರಣವಾಗಿತ್ತೆಂದು ಮೂಲಗಳು ಹೇಳಿವೆ. ಮೇ 10, 2019 ರಂದು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲಾಗಿತ್ತು. 2019 ರಲ್ಲಿ ಲೀ ಭಾರತಕ್ಕೆ ಬರುವುದನ್ನು ನಿಲ್ಲಿಸಿದ್ದರು.