ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರ ಹುಟ್ಟುಹಬ್ಬ ಮುಂದಿನ ತಿಂಗಳು ಜುಲೈ 4ರಂದು ಇರುವುದರಿಂದ ಅಭಿಮಾನಿಗಳಿಗೆ ನನ್ನ ಹುಟ್ಟುಹಬ್ಬಕ್ಕೆ ಹಾರ, ಕೇಕ್ ಇವುಗಳಿಗೆ ಖರ್ಚು ಮಾಡುವ ಬದಲು ಬಡವರಿಗೆ ರೇಷನ್ ಸಹಾಯ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಈ ಸಮಯದಲ್ಲಿ ಸಾಮಾಜಿಕ ಅಂತರ ಕೂಡ ಅಷ್ಟೇ ಮುಖ್ಯ ಎಂದು ಅವರು ಹೇಳಿದ್ದಾರೆ.
ಕಳೆದ ಬಾರಿ ಪ್ರಜ್ವಲ್ ದೇವರಾಜ್ ಹೇಳಿದಂತೆ ಅವರ ಅಭಿಮಾನಿಗಳು ವಿದ್ಯಾರ್ಥಿಗಳನ್ನು ದತ್ತು ಪಡೆದು ಶಾಲೆಗಳಿಗೆ ಸಹಾಯ ಮಾಡಿದ್ದರು. ಈ ಬಾರಿಯ ಹುಟ್ಟುಹಬ್ಬದಂದು ಬಡವರಿಗೆ ಸಹಾಯ ಮಾಡಿ ಎಂದು ಅಭಿಮಾನಿಗಳಿಗೆ ಹೇಳಿದ್ದಾರೆ.
https://www.instagram.com/tv/CBz4d01gpre/?igshid=uvcwete63woz