ಎವರ್ ಗ್ರೀನ್ ಬ್ಯೂಟಿ ನಟಿ ರೇಖಾಗೆ ಇಂದು ಹುಟ್ಟುಹಬ್ಬದ ಸಂಭ್ರಮ. ರೇಖಾ 66ನೇ ವರ್ಷಕ್ಕೆ ಕಾಲಿಡ್ತಿದ್ದಾರೆ. ತಮ್ಮ ನಟನೆಯಿಂದಲೇ ರೇಖಾ ಲಕ್ಷಾಂತರ ಅಭಿಮಾನಿಗಳ ಮನಸ್ಸಿನಲ್ಲಿ ನೆಲೆ ನಿಂತಿದ್ದಾರೆ. ಈಗ್ಲೂ ರೇಖಾಗೆ ಅಭಿಮಾನಿಗಳ ಸಂಖ್ಯೆ ಸಾಕಷ್ಟಿದೆ. ಫ್ಯಾಷನ್ ಲೋಕದ ಐಕಾನ್ ಗಳಲ್ಲಿ ರೇಖಾ ಒಬ್ಬರು.
ಚಿತ್ರರಂಗಕ್ಕೆ ಪ್ರವೇಶ ಮಾಡಿ ರೇಖಾ 54 ವರ್ಷಗಳಾಗಿವೆ. ಆದ್ರೆ ರೇಖಾ ವೃತ್ತಿ ಬದುಕು ಸುಲಭವಾಗಿರಲಿಲ್ಲ. ತಮ್ಮ 11ನೇ ವಯಸ್ಸಿನಲ್ಲೇ ರೇಖಾ ಬಾಲಿವುಡ್ ಗೆ ಪ್ರವೇಶ ಮಾಡಿದ್ದರು. ಚೆಲ್ಡ್ ಆರ್ಟಿಸ್ಟ್ ಆಗಿ ರೇಖಾ ವೃತ್ತಿ ಶುರು ಮಾಡಿದ್ದರು. 15ನೇ ವರ್ಷದಲ್ಲಿ ರೇಖಾ ಅಂಜಾನಾ ಸಫರ್ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರದ ಕಿಸ್ಸಿಂಗ್ ಸೀನ್ ಈಗ್ಲೂ ಚರ್ಚೆಯಾಗ್ತಿರುತ್ತದೆ.
ಸೆಟ್ ನಲ್ಲಿ ನಡೆದ ಘಟನೆ ಬಗ್ಗೆ ʼರೇಖಾ: ದಿ ಅನ್ಟೋಲ್ಡ್ ಸ್ಟೋರಿʼಯಲ್ಲೂ ಹೇಳಲಾಗಿದೆ. 1969ರಲ್ಲಿ ಬಂದ ಚಿತ್ರದ ಶೂಟಿಂಗ್ ಮುಂಬೈನ ಮೆಹಬೂಬ್ ಸ್ಟುಡಿಯೋದಲ್ಲಿ ನಡೆಯುತ್ತಿತ್ತು. ಈ ವೇಳೆ ರೋಮ್ಯಾಂಟಿಕ್ ದೃಶ್ಯದ ಶೂಟಿಂಗ್ ದಿನ ರೇಖಾಗೆ ವಿಷ್ಯ ಹೇಳಿರಲಿಲ್ಲ. ಕಟ್ ಹೇಳ್ತಿದ್ದಂತೆ ನಟ ಬಿಸ್ವಜಿತ್, ರೇಖಾ ತುಟಿಗೆ ಮುತ್ತಿಟ್ಟಿದ್ದರು. ರೇಖಾಗೆ ಈ ವಿಷ್ಯ ತಿಳಿದಿರಲಿಲ್ಲವಂತೆ. ನಿರ್ದೇಶಕರು ಕಟ್ ಹೇಳಿರಲಿಲ್ಲವಂತೆ. ರೇಖಾರ ಮುಚ್ಚಿದ್ದ ಕಣ್ಣಿನಲ್ಲಿ ನೀರು ಬರ್ತಿತ್ತಂತೆ. ಆದ್ರೆ ಬಿಸ್ವಜಿತ್ 5 ನಿಮಿಷಗಳ ಕಾಲ ತುಟಿಗೆ ಮುತ್ತಿಟ್ಟಿದ್ದರಂತೆ. ಈ ದೃಶ್ಯದ ನಂತ್ರ ಕೋಪ, ದುಃಖ ಎಲ್ಲವನ್ನೂ ಒಟ್ಟಿಗೆ ಎದುರಿಸಿದ್ದರಂತೆ ರೇಖಾ.