ನಟಿಯರು ಹೇಗೆ ತಮ್ಮ ಸೌಂದರ್ಯವನ್ನು ಹೇಗೆ ಕಾಪಾಡಿಕೊಳ್ಳುತ್ತಾರೆ ಎಂಬ ಕುತೂಹಲ ಹಲವರಿಗಿದೆ. ಹಾಗೇ ಅದರ ಬಗ್ಗೆ ತಿಳಿದುಕೊಳ್ಳಲು ಬಯಸುತ್ತಾರೆ.
ಬಾಲಿವುಡ್ ನಟಿ ಬಿಪಾಶಾ ಬಸು ಅವರು ತಮ್ಮ ಇನ್ ಸ್ಟಾಗ್ರಾಂನಲ್ಲಿ ಸೌಂದರ್ಯದ ಕೆಲವು ಟಿಪ್ಸ್ ಗಳನ್ನು ನೀಡಿದ್ದು, ಅದರಲ್ಲಿ ಅವರು ತಮ್ಮ ಕೂದಲು ಹಾಗೂ ಕಣ್ಣುಗಳ ಸೌಂದರ್ಯವನ್ನು ಹೇಗೆ ಕಾಪಾಡುತ್ತಾರೆ ಎಂಬುದನ್ನು ತಿಳಿಸಿದ್ದಾರೆ.
ನಟಿ ಬಿಪಾಶಾ ಬಸು ಅವರು ಕೂದಲಿನ ಬೆಳವಣಿಗೆ ಹೆಚ್ಚಿಸಲು ಈರುಳ್ಳಿ ರಸವನ್ನು ಅವರ ನೆತ್ತಿಗೆ ಹಚ್ಚಿ ಮಸಾಜ್ ಮಾಡುತ್ತಾರಂತೆ. ಬಳಿಕ 1 ಗಂಟೆ ಬಿಟ್ಟು ಕೂದಲನ್ನು ವಾಶ್ ಮಾಡುತ್ತಾರಂತೆ.
ಹಾಗೇ ಕಣ್ಣುಗಳ ಸೌಂದರ್ಯ ಕಾಪಾಡಲು ಪ್ರತಿದಿನ ರಾತ್ರಿ ಕಣ್ಣುಗಳ ಸುತ್ತಲೂ ಬಾದಾಮಿ ಎಣ್ಣೆಯಿಂದ ಮಸಾಜ್ ಮಾಡಿ ಬೆಳಿಗ್ಗೆ ವಾಶ್ ಮಾಡುತ್ತಾರಂತೆ. ಇದರಿಂದ ಕಣ್ಣಿನ ಸುತ್ತ ಕಪ್ಪು ಕಲೆ, ಸುಕ್ಕುಗಟ್ಟುವುದು ನಿವಾರಣೆಯಾಗುತ್ತದೆಯಂತೆ.