ನಟಿ ಪ್ರಿಯಾಂಕ ಚೋಪ್ರಾ ಅವರಿಗೆ ಮನೆಮದ್ದುಗಳ ಮೂಲಕವೇ ತಮ್ಮ ತ್ವಚೆಯ ಕಾಂತಿಯನ್ನು ಹೆಚ್ಚಿಸಿಕೊಳ್ಳುವುದು ಇಷ್ಟವಂತೆ. ಹಾಗೇ ಇವರ ಬ್ಯೂಟಿ ಟಿಪ್ಸ್ ಕೂಡ ತುಂಬಾ ದುಬಾರಿಯೇನಲ್ಲ. ಸರಳವಾಗಿ ಮನೆಯಲ್ಲಿ ಯಾರು ಬೇಕಾದರೂ ಮಾಡಬಹುದು.
ಹೊಳೆಯುವ ತ್ವಚೆಗಾಗಿ ಒಂದು ಬೌಲ್ ಗೆ 2 ಟೀ ಸ್ಪೂನ್ ನಷ್ಟು ಕಡಲೆಹಿಟ್ಟು, ಚಿಟಿಕೆ ಅರಿಶಿನ, 4 ಹನಿ ಲಿಂಬೆಹಣ್ಣಿನ ರಸ ಸೇರಿಸಿ ನಂತರ 1 ಟೇಬಲ್ ಸ್ಪೂನ್ ನಷ್ಟು ಮೊಸರು, 4 ಹನಿ ರೋಸ್ ವಾಟರ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನು ನಿಮ್ಮ ಮುಖ, ಕುತ್ತಿಗೆ ಬಳಿ ಹಾಕಿ 15 ನಿಮಿಷಗಳ ಕಾಲ ಬಿಟ್ಟು ಬಿಡಿ. ನಂತರ ಸ್ವಲ್ಪ ನೀರು ಚಿಮುಕಿಸಿಕೊಂಡು ನಿಧಾನಕ್ಕೆ ತಿಕ್ಕಿದರೆ ಮುಖ ಕ್ಲೀನ್ ಆಗುತ್ತದೆ.
ಇನ್ನು ಪ್ರಿಯಾಂಕ ತಮ್ಮ ಮುಖದ ಮೇಕಪ್ ತೆಗೆದುಕೊಳ್ಳುವುದಕ್ಕೆ ಯಾವುದೇ ರೀತಿಯ ಕೆಮಿಕಲ್ ಉಪಯೋಗಿಸುವುದಿಲ್ಲವಂತೆ. ಶುದ್ಧವಾದ ತೆಂಗಿನೆಣ್ಣೆಯನ್ನು ತೆಗೆದುಕೊಂಡು ಅದರಿಂದ ಮುಖಕ್ಕೆ ಮಸಾಜ್ ಮಾಡಿಕೊಂಡು ನಂತರ ಒಂದು ಟವಲ್ ಅನ್ನು ಬಿಸಿನೀರಿನಲ್ಲಿ ಅದ್ದಿ ಅದರ ಸಹಾಯದಿಂದ ಮುಖದಲ್ಲಿರುವ ಮೇಕಪ್ ತೆಗೆದುಕೊಳ್ಳುತ್ತಾರೆ.
ಇನ್ನು ತಲೆಕೂದಲಿನ ಕಾಳಜಿಗಾಗಿ ಒಂದು ಬೌಲ್ ಗೆ 1 ಮೊಟ್ಟೆ, 1 ಟೀ ಸ್ಪೂನ್ ಜೇನುತುಪ್ಪ, 1 ಟೀ ಸ್ಪೂನ್ ಮೊಸರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಇದನ್ನು ತಲೆಗೆ ಹಾಕಿ 30 ನಿಮಿಷಗಳ ಕಾಲ ಬಿಟ್ಟು ನಂತರ ಹೆಚ್ಚು ಕೆಮಿಕಲ್ ಇಲ್ಲದ ಶಾಂಪೂವಿನಿಂದ ತಲೆ ತೊಳೆದುಕೊಳ್ಳುತ್ತಾರಂತೆ.