ನಟಿ ಐಶ್ವರ್ಯಾ ರೈ ವಿಶ್ವ ಸುಂದರಿ ಎನಿಸಿಕೊಂಡಿರುವವರು. ಮದುವೆಯಾಗಿ ಒಂದು ಮಗುವಿನ ತಾಯಿ ಎನಿಸಿಕೊಂಡರು ಈಗಲೂ ಅವರು ಚಿಕ್ಕ ಹುಡುಗಿಯಂತೆ ಸುಂದರವಾಗಿದ್ದಾರೆ. ಹಾಗಾದ್ರೆ ಅವರ ಸೌಂದರ್ಯದ ರಹಸ್ಯ ಏನೆಂಬುದನ್ನು ತಿಳಿದುಕೊಳ್ಳುವ ಆಸಕ್ತಿ ಹಲವರಿಗಿದೆ.
ನಟಿ ಐಶ್ವರ್ಯಾ ರೈ ಅವರು ತಮ್ಮ ಚರ್ಮವನ್ನು ಬ್ಯಾಕ್ಟೀರಿಯಾ ಸೋಂಕುಗಳಿಂದ ಕಾಪಾಡಲು ಜೇನುತುಪ್ಪವನ್ನು ಬಳಸುತ್ತಾರೆ. ಜೇನುತುಪ್ಪ ಚರ್ಮದ ಕೋಶಗಳನ್ನು ಆಂತರಿಕವಾಗಿ ಕಾಪಾಡುತ್ತದೆ. ಅದಕ್ಕಾಗಿ ಅವರು ತನ್ನ ಆಹಾರದಲ್ಲಿ ಜೇನುತುಪ್ಪವನ್ನು ಸಹ ಬಳಸುತ್ತಾರೆ. ಇದರಿಂದ ಅವರ ಚರ್ಮ ಯಾವಾಗಲೂ ಹೊಳೆಯುತ್ತದೆ.
ನಮ್ಮ ಚರ್ಮದಲ್ಲಿರುವ ಸತ್ತ ಜೀವಕೋಶಗಳನ್ನು ತೆಗೆದು ಹಾಕಿ ಹೊಸ ಕೋಶಗಳ ರಚನೆಗೆ ಜೇನುತುಪ್ಪ ಸಹಾಯ ಮಾಡುತ್ತದೆ. ಹಾಗಾಗಿ ಚರ್ಮದ ಮೇಲೆ ನಿಯಮಿತವಾಗಿ ಜೇನುತುಪ್ಪ ಹಚ್ಚುವುದರಿಂದ ಯಾವುದೇ ರೀತಿಯ ಚರ್ಮದ ಸೋಂಕು ಉಂಟಾಗುವುದಿಲ್ಲ. ಆದ ಕಾರಣ ಐಶ್ವರ್ಯಾ ರೈ ಚರ್ಮ ಕಲೆಗಳಿಂದ ಮುಕ್ತವಾಗಿದೆ ಎನ್ನಲಾಗಿದೆ.