![](https://kannadadunia.com/wp-content/uploads/2020/12/306f9846-3d31-439a-999c-597f4ed8b015.jpg)
ಧ್ರುವ ಸರ್ಜಾ ಅವರ ಬಹುನಿರೀಕ್ಷೆಯ ‘ಪೊಗರು’ ಚಿತ್ರ ಬಿಡುಗಡೆಗೆ ಸಜ್ಜಾಗಿದ್ದು, ಇದೀಗ ಮತ್ತೊಂದು ಹೊಸ ಸಿನಿಮಾದಲ್ಲಿ ಧ್ರುವ ಸರ್ಜಾ ನಟಿಸುತ್ತಿದ್ದಾರೆ.
ಈ ಚಿತ್ರಕ್ಕೆ ‘ದುಬಾರಿ’ ಎಂದು ಹೆಸರಿಟ್ಟಿದ್ದು ಈ ಸಿನಿಮಾಗೆ ನಟಿ ಶ್ರೀಲೀಲಾ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಿದ್ದಾರೆ. ನಂದ ಕಿಶೋರ್ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದು, ನಟಿ ಶ್ರೀಲೀಲಾ ಈ ಚಿತ್ರದಲ್ಲಿ ಅಭಿನಯಿಸಲು ಸಜ್ಜಾಗಿದ್ದಾರೆ.
‘ಕಿಸ್’ ಹಾಗೂ ‘ಭರಾಟೆ’ ಚಿತ್ರಗಳ ಮೂಲಕ ಮನೆಮಾತಾಗಿರುವ ಶ್ರೀಲೀಲಾ ಇದೀಗ ‘ದುಬಾರಿ’ ಚಿತ್ರದಲ್ಲಿ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಜೊತೆ ಜೋಡಿಯಾಗಲಿದ್ದಾರೆ.