
ಬಾಲಿವುಡ್ ಮೂವರು ನಟಿಯರಿಗೆ ಶನಿವಾರ ಸವಾಲಿನ ದಿನವಾಗಿತ್ತು. ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿಯರಾದ ದೀಪಿಕಾ ಪಡುಕೋಣೆ, ಸಾರಾ ಅಲಿಖಾನ್ ಹಾಗೂ ಶ್ರದ್ಧಾ ಕಪೂರ್ ವಿಚಾರಣೆ ನಡೆದಿದೆ. ವಿಚಾರಣೆ ವೇಳೆ ದೀಪಿಕಾ ಕಣ್ಣೀರಿಟ್ಟಿದ್ದಾರಂತೆ.
ಸುಮಾರು ಐದುವರೆ ಗಂಟೆಗಳ ಕಾಲ ದೀಪಿಕಾ ವಿಚಾರಣೆ ನಡೆದಿದೆ. ವಿಚಾರಣೆ ಮಧ್ಯೆ ಎನ್ ಸಿಬಿಗೆ ಉತ್ತರ ನೀಡುವ ಬದಲು ದೀಪಿಕಾ ಅತ್ತಿದ್ದಾರಂತೆ. ಒಂದಲ್ಲ ಎರಡಲ್ಲ ಮೂರು ಬಾರಿ ದೀಪಿಕಾ ಕಣ್ಣೀರಿಟ್ಟಿದ್ದಾರೆ. ದೀಪಿಕಾ ಅಳ್ತಿರುವುದನ್ನು ನೋಡಿದ ಎನ್ ಸಿಬಿ ಅವ್ರಿಗೆ ಕೈ ಜೋಡಿಸಿ ಅಳು ನಿಲ್ಲಿಸುವಂತೆ ಹೇಳಿದೆ ಎಂದು ಮೂಲಗಳು ಹೇಳಿವೆ.
ಅಳು ನಿಲ್ಲಿಸಿ ಪ್ರಶ್ನೆಗೆ ಉತ್ತರ ನೀಡಿ ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ. ಸತ್ಯ ಒಪ್ಪಿಕೊಂಡರೆ ನಿಮಗೆ ಒಳ್ಳೆಯದೆಂದು ಎನ್ ಸಿಬಿ ಹೇಳಿದೆ ಎನ್ನಲಾಗಿದೆ. ದೀಪಿಕಾ ಮೊಬೈಲನ್ನು ಎನ್ ಸಿಬಿ ವಶಕ್ಕೆ ಪಡೆದಿದೆ. ಮೊಬೈಲ್ ನಲ್ಲಿರುವ ಮಾಹಿತಿಯನ್ನು ಎನ್ ಸಿಬಿ ಕಲೆ ಹಾಕಲಿದೆ.