
ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಟಾಲಿವುಡ್ ನ ನಟ ಮಹೇಶ್ ಬಾಬು ಆಗಸ್ಟ್ 9ರಂದು 45ನೇ ವಸಂತಕ್ಕೆ ಕಾಲಿಟ್ಟಿದ್ದು, ಆ ದಿನ ಮಹೇಶ್ ಬಾಬು ಅಭಿಮಾನಿಗಳು ಹೊಸ ರೆಕಾರ್ಡ್ ಮಾಡಿದ್ದಾರೆ.
ಮಹೇಶ್ ಬಾಬು ಅವರ ಅಭಿಮಾನಿಗಳು ಶುಭಾಶಯ ಕೋರಿ ಸಂಭ್ರಮಿಸಿದ್ದಾರೆ. ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ 60.2 ಮಿಲಿಯನ್ ಗೂ ಹೆಚ್ಚು ಬಾರಿ ಹ್ಯಾಶ್ ಟ್ಯಾಗ್ ಬಳಕೆ ಆಗಿದೆ. ಅವರ ಹೆಸರಿನಲ್ಲಿ 18 ಗಂಟೆಯಲ್ಲಿ ದಾಖಲೆ ಸೃಷ್ಟಿಸಿದೆ ಎಂದು ಹೇಳಲಾಗಿದೆ.